ಹಿರಿಯ ನಟ ಮಿಥುನ್ ಚಕ್ರವರ್ತಿಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ
ದೆಹಲಿ: ಹಿರಿಯ ಹಿಂದಿ ಹಾಗೂ ಬಂಗಾಳಿ ಲೆಜೆಂಡರಿ ನಟ ಮಿಥುನ್ ಚಕ್ರವರ್ತಿಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ನೀಡಲಾಗುವುದೆಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಅಕ್ಟೋಬರ್ 8ರಂದು ನಡೆಯಲಿರುವ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಿಥುನ್ ಚಕ್ರವರ್ತಿಗೆ ಈ ಪ್ರಶಸ್ತಿ ನೀಡಲಾಗುವು ದೆಂದು ಸಚಿವರು ಘೋಷಿಸಿದ್ದಾರೆ. ಮಿಥುನ್ ಚಕ್ರವರ್ತಿ 1976ರಲ್ಲಿ ಚಿತ್ರರಂಗದಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ನಟ ಮಾತ್ರವಲ್ಲದೆ ನಿರ್ಮಾಪಕರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಡಿಸ್ಕೋ ಡ್ಯಾನ್ಸರ್ ಸಿನಿಮಾದಿಂದ ಅವರು ವಿಶೇಷ ಗಮನ ಸೆಳೆಯುವ ಮೂಲಕ ಹಿಂದಿ ಚಲನಚಿತ್ರ ರಂಗದ ಓರ್ವ ಮೇರು ನಟನಾಗಿ ಬೆಳೆದರು. ಅವರಿಗೆ ರಾಷ್ಟ್ರಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳೂ ಲಭಿಸಿವೆ. ಸಿನಿಮಾ ಕ್ಷೇತ್ರದಲ್ಲಿ ಅವರ ಸೇವೆಯನ್ನು ಗುರುತಿಸಿದ ಕೇಂದ್ರ ಸರಕಾರ ಈ ವರ್ಷದ ಜನವರಿಯಲ್ಲಿ ಪದ್ಮಭೂ ಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.