ಹುಡುಗಿಗೆ ಕಿರುಕುಳ: ಆರೋಪಿಗೆ ಐದು ವರ್ಷ ಸಜೆ, ದಂಡ

ಕಾಸರಗೋಡು: ಪ್ರಾಯಪೂರ್ತಿ ಯಾಗದ ಹುಡುಗಿಗೆ ಲೈಂಗಿಕ ರೀತಿಯ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಹೊಸದುರ್ಗ ಫಾಸ್ಟ್ ಟ್ರಾಕ್  ಸ್ಪೆಷಲ್ ಕೋರ್ಟ್ ಐದು ವರ್ಷ ಸಜೆ ಹಾಗೂ ೨೫,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.

ಪೆರಿಯಾ ಮಂಡತ್ತಿಕಂಡದ ಸುಂದರನ್ (೬೩) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ.  ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಐದು ತಿಂಗಳ ಹೆಚ್ಚುವರಿ ಸಜೆ ಅನುಭಸಬೇ ಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ೨೦೧೮ ಅಕ್ಟೋಬರ್‌ನಲ್ಲಿ ೧೭ ವರ್ಷದ ಹುಡುಗಿ ಆರೋಪಿಯ ಮನೆಗೆ ಹೋಗಿದ್ದ ವೇಳೆ ಅಲ್ಲಿ ಆಕೆಗೆ ಲೈಂಗಿಕ ರೀತಿಯ ಕಿರುಕುಳ  ನೀಡಿದ ದೂರಿನಂತೆ ಬೇಕಲ ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು.  ಅಂದು ಬೇಕಲ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆಗಿದ್ದ  ಸಿ. ರಾಮಚಂದ್ರನ್ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ  ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

You cannot copy contents of this page