ಅಂಗಡಿಗೆ ತಲುಪಿದ ಬಾಲಕಿ, ಅಸ್ವಸ್ಥ ಯುವತಿ ಮಾನಭಂಗಕ್ಕೆತ್ನ: ಇಬ್ಬರು ಆರೋಪಿಗಳ ವಿರುದ್ಧ ಕೇಸು
ಕಾಸರಗೋಡು: ಅಂಗಡಿ ಯಿಂದ ಸಾಮಗ್ರಿ ಖರೀದಿಸಲೆಂದು ತಲುಪಿದ 13ರ ಹರೆಯದ ಬಾಲಕಿಯನ್ನು ಮಾನಭಂಗಪಡಿಸಿ ರುವುದಾಗಿ ನೀಡಿದ ದೂರಿನಲ್ಲಿ ವ್ಯಾಪಾರಿ ವಿರುದ್ಧ ಪೋಕ್ಸೋ ಕೇಸು ದಾಖಲಿಸಲಾಗಿದೆ. ಬಳಾಲ್ ನಿವಾಸಿ ಬಶೀರ್ (54) ವಿರುದ್ಧ ವೆಳ್ಳರಿಕುಂಡ್ ಪೊಲೀಸರು ಕೇಸು ದಾಖಲಿಸಿದ್ದಾರೆ. ಈತನನ್ನು ಬಂಧಿ ಸಲಾಗಿದೆ. ನಿನ್ನೆ ಬೆಳಿಗ್ಗೆ 9 ಗಂಟೆಗೆ ಘಟನೆ ನಡೆದಿದೆ. ಬಳಾಲ್ ಶಾಲೆಗೆ ಸಮೀಪ ಕಾರ್ಯಾಚರಿಸುತ್ತಿರುವ ಆರೋಪಿಯ ಅಂಗಡಿಗೆ ಬಾಲಕಿ ತಲುಪಿದ್ದಳು. ಮಾಸ್ಕ್ ಖರೀದಿಸಿದ ಬಳಿಕ ಅಂಗಡಿಯಲ್ಲಿ ಮಾರಾಟಕ್ಕಿದ್ದ ಕಿವಿಯೋಲೆ ನೋಡಿ ನಿಂತಿದ್ದ ವೇಳೆ ಹಿಂದಿನಿಂದ ತಲುಪಿದ ಆರೋಪಿ ಬಾಲಕಿಯನ್ನು ಹಿಡಿದಿರುವುದಾಗಿ ದೂರಲಾಗಿದೆ. ಇದೇ ವೇಳೆ ಅಸ್ವಸ್ಥ ಯುವತಿಯ ಖಾಸಗಿ ಫೊಟೋವನ್ನು ಎಫ್‌ಬಿಯಲ್ಲಿ ಪ್ರಚಾರ ಮಾಡಿರುವುದಾಗಿ ನೀಡಿದ ದೂರಿನಂತೆ ಚಂದೇರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಸೋಮನ್ ಎಂಬ ವ್ಯಕ್ತಿ ವಿರುದ್ಧ ಕೇಸು ದಾಖಲಿಸಲಾಗಿದೆ. ಇದು ನಿಜವಾದ ಖಾತೆಯೋ ಎಂಬುವುದು ಸ್ಪಷ್ಟವಲ್ಲ. ಈ ಬಗ್ಗೆ ತನಿಖೆ ನಡೆಸಲು ಚಂದೇರ ಪೊಲೀಸರು ಸೈಬರ್ ಪೊಲೀಸರ ಸಹಾಯ ಆಗ್ರಹಿಸಿದ್ದಾರೆ. ಯುವತಿಗೆ ಮಾನ ಹಾನಿಯುಂಟಾಗಿದೆ ಎಂದು ಸಹೋದರಿಯ ಪತಿ ಪೊಲೀಸರಿಗೆ ದೂರು ನೀಡಿದ್ದರು.