ಅಂಗಡಿಗೆ ನುಗ್ಗಿ ಇರಿತ: ಆರೋಪಿ ಸೆರೆ, ನ್ಯಾಯಾಂಗ ಬಂಧನ

ಕಾಸರಗೋಡು: ಮೀಪುಗುರಿ ಯಲ್ಲಿ ಅಂಗಡಿಗೆ ನುಗ್ಗಿ ಯುವಕನಿಗೆ ಇರಿದು ಗಂಭೀರ ಗಾಯಗೊಳಿಸಿದ ಪ್ರಕರಣದ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ಆತನನ್ನು ನ್ಯಾಯಾಂಗ ಬಂಧನದಲ್ಲಿರಿ ಲಾಗಿದೆ.ಅಣಂಗೂರು ಜೆ.ಪಿ. ಕಾಲನಿ ನಿವಾಸಿ ಕೆ. ಅಕ್ಷಯ್ (ಮುನ್ನ-31) ಬಂಧಿತ ಆರೋಪಿ. ಮೀಪುಗುರಿಯಲ್ಲಿ ಹೊಸದಾಗಿ ಆರಂಭಿಸುವ ಅಂಗಡಿ ಯ ಪೈಂಟಿಂಗ್ ಕೆಲಸ ನಡೆಸುತ್ತಿದ್ದ ವೇಳೆ ನಿನ್ನೆ ಮುಂಜಾನೆ ಅಲ್ಲಿಗೆ ತೆರಳಿ ಅಂಗಡಿಯಲ್ಲಿದ್ದ ಎರಿಯಾಲ್‌ನ ಬಾಸಿತ್ (25) ಎಂಬಾತನಿಗೆ ಇರಿದು ಗಾಯಗೊ ಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಕ್ಷಯ್‌ನನ್ನು ಬಂಧಿಸ ಲಾಗಿದೆ. ಅಂಗಡಿ ಆರಂಭಿಸುವು ದಕ್ಕಿರುವ ವಿರೋಧವೇ ಇರಿತಕ್ಕೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.

ಆ ವೇಳೆ ಅಂಗಡಿಯಲ್ಲಿದ್ದ ಎರಿಯಾಲ್ ನಿವಾಸಿ ಮೊಹಮ್ಮದ್ ಅಸೀಫ್ ಸಹೀರ್ (22) ಈ ಬಗ್ಗೆ   ಪೊಲೀ ಸರಿಗೆ ದೂರು ನೀಡಿದ್ದರು. ಡಿವೈಎಸ್ಪಿ  ಸಿ.ಕೆ. ಸುನಿಲ್ ಕುಮಾರ್ ನೀಡಿದ ನಿರ್ದೇಶ ಪ್ರಕಾರ ಪೊಲೀಸರು ನಡೆಸಿದ ತ್ವರಿತ ಕಾರ್ಯಾಚರ ಣೆಯಲ್ಲಿ ಆರೋ ಪಿಯನ್ನು ಬಂಧಿಸಲು ಸಾಧ್ಯವಾಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page