ಅಂತಾರಾಜ್ಯ ಕಳವು ಪ್ರಕರಣಗಳ ಆರೋಪಿ ಸೆರೆ
ಮಂಜೇಶ್ವರ: ಕೇರಳ ಮತ್ತು ಕರ್ನಾಟಕದಲ್ಲಿ ನಡೆದ ಹಲವು ಕಳವು ಪ್ರಕರಣಗಳ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ ಚಿಕ್ಕಮಗಳೂರು ತಾರಿಗುಡ್ಡೆ ನಿವಾಸಿ ಮೊಹಮ್ಮದ್ ಅಶ್ರಫ್ ಬಂಧಿತ ಆರೋಪಿ. ಮಂಜೇಶ್ವರ ಪೊಲೀಸ್ ಠಾಣೆವ್ಯಾಪ್ತಿಗೊಳಪಟ್ಟ ವರ್ಕಾಡಿ ಗ್ರಾಮದ ಹಲವು ಅಂಗಡಿಗಳು, ದೇವಸ್ಥಾನಗಳು, ಮಸೀದಿಗಳಲ್ಲಿ ನಡೆದ ಕಳವು ಪ್ರಕರಣಗಳಲ್ಲಿ ಮೊಹಮ್ಮದ್ ಅಶ್ರಫ್ ಆರೋಪಿಯಾಗಿದ್ದಾನೆ. ಮಾತ್ರವಲ್ಲ ಕರ್ನಾಟಕದ ಹಲವು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಕೇಸುಗಳಿವೆ.
ಮಲಪ್ಪುರಂ ಜಿಲ್ಲೆಯ ಅಮರಂಬಲಂ ಎಂಬಲ್ಲಿಂದ ಈತನನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಆರೋಪಿಯ ಪತ್ತೆಗಾಗಿ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಡಿ. ಶಿಲ್ಪ ವಿಶೇಷ ಕ್ರೈಂ ಸ್ಕ್ವಾಡ್‌ಗೆ ರೂಪು ನೀಡಿದ್ದರು. ಅದರಂತೆ ಕಾಸರಗೋಡು ಡಿವೈಎಸ್ಪಿ ಸಿ.ಕೆ. ಸುನಿತ್ ಕುಮಾರ್‌ರ ಮೇ ಲ್ನೋಟದಲ್ಲಿ ಇನ್‌ಸ್ಪೆಕ್ಟರ್ ಅನೂಬ್ ಕುಮಾರ್ ಇ, ಎಸ್‌ಐ ರತೀಶ್‌ಗೋಪಿ, ಎಸ್‌ಸಿಪಿಒ ಪ್ರಮೋದ್, ಸಿಪಿಒಗಳಾದ ಸಜಿತ್, ಅಶ್ವಿಂತ್ ಕುಮಾರ್, ಪ್ರಣವ್, ಸಂದೀಪ್ ಮತ್ತು ವಂದನ ಎಂಬವರು ಒಳ ಗೊಂಡ ಕ್ರೈಂ ಸ್ಕ್ವಾಡ್ ತಂಡ ಆರೋಪಿಯನ್ನು ಬಂಧಿಸಿದೆ.