ಅಂತಾರಾಷ್ಟ್ರೀಯ ಮಾನವ ಕಳ್ಳ ಸಾಗಾಟ: ಏಳು ರಾಜ್ಯಗಳಲ್ಲಿ ಸಿಬಿಐ ದಾಳಿ ಸೂತ್ರಧಾರರಾದ ಕೇರಳದ ಇಬ್ಬರ ಸೆರೆ
ತಿರುವನಂತಪುರ: ಲಾಭದಾಯಕ ಉದ್ಯೋಗದ ಸೋಗಿನಲ್ಲಿ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಸೈನ್ಯಕ್ಕೆ ಸೇರ್ಪಡೆಗೊಳಿಸುವ ಮಾನವ ಕಳ್ಳಸಾಗಾಟ ದಂಧೆಗೆ ಸಂಬಂಧಿಸಿ ಕೇರಳ ಸೇರಿ ಭಾರತದ ಏಳು ರಾಜ್ಯಗಳಲ್ಲಿ ಸಿಬಿಐ ದಾಳಿ ಆರಂಭಿಸಿದೆ.
ಇದರಂತೆ ಕೇರಳದಲ್ಲಿ ನಡೆಸಿದ ದಾಳಿಯಲ್ಲಿ ಮಾನವ ಕಳ್ಳಸಾಗಾಟ ಸೂತ್ರಧಾರರಾದ ತಿರುವನಂತಪುರ ವೂವಾಕ್ ಕರಿಕುಳ ನಿವಾಸಿ ಅರುಣ್ (40) ಮತ್ತು ತಿರುವನಂತಪುರ ತುಂಬಾ ನಿವಾಸಿ ಯೇಸುದಾಸನ್ ಅಲಿಯಾಸ್ ಪ್ರಿಯನ್ (50) ಎಬಿವರನ್ನು ಸಿಬಿಐಯ ತಿರುವನಂತಪುರ ಘಟಕ ಬಂಧಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಎಪ್ರಿಲ್ ೨೪ರಂದು ಸಿಬಿಐ ನಡೆಸಿದ ಕಾರ್ಯಾಚರಣೆಯಲ್ಲಿ ನಿಜಿಲ್ ಜೋಬಿ ಬೋನ್ಸೋಮ್ ಮತ್ತು ಅಂಥೋನಿ ಮೈಕಲ್ ಇಳಂಗೋವನ್ ಎಂಬವರನ್ನು ಬಂಧಿಸಿತ್ತು. ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಾಣೆಯ ಪ್ರಧಾನ ಸೂತ್ರಧಾರ ರಷ್ಯಾದ ಪೌರತ್ವ ಹೊಂದಿರುವ ಮೂಲತಃ ತಿರುವನಂತಪುರ ನಿವಾಸಿ ನಿಟಾಸಿ ಅಲೆಕ್ಸ್ ಆಗಿರುವುದಾಗಿಯೂ ಸಿಬಿಐ ನಡೆಸಿದ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಕೊಲ್ಲಂನ್ನು ಪ್ರಧಾನ ಕೇಂದ್ರವನ್ನಾಗಿಸಿ ಈ ಮಾನವ ಕಳ್ಳಸಾಗಾಟ ಜಾಲ ಕಾರ್ಯವೆಸಗುತ್ತಿದೆ.
ಹೀಗೆ ಮಾನವ ಕಳ್ಳಸಾಗಾಟ ಮೂಲಕ ರಷ್ಯಾಕ್ಕೆ ಸಾಗಿಸಲ್ಪಟ್ಟು ಬಳಿಕ ಅಲ್ಲಿ ಸಿಲುಕಿಕೊಂಡಿದ್ದ ಕೇರಳದ ಡೇವಿಡ್ ಮುತ್ತಪ್ಪನ್ ಮತ್ತು ಪ್ರಿನ್ಸ್ ಸೆಬಾಸ್ಟಿಯನ್ ಎಂಬವರು ಕಳೆದ ತಿಂಗಳು ಅಲ್ಲಿಂದ ತಪ್ಪಿಸಿಕೊಂಡು ಭಾರತಕ್ಕೆ ಹಿಂತಿರುಗಿದ್ದರು. ಇನ್ನೂ ಹಲವರು ರಷ್ಯಾದಲ್ಲಿ ಈಗಲೂ ಸಿಲುಕಿಕೊಂಡಿದ್ದಾರೆನ್ನಲಾಗಿದೆ.
ಈ ವಂಚನಾ ಜಾಲವು ದೇಶಾದ್ಯಂ ತವಾಗಿ ಕಾರ್ಯವೆಸಗಿ ವಿದೇಶದಲ್ಲಿ ಭಾರೀ ವೇತನದ ಉದ್ಯೋಗಾವಕಾಶ ಗಳ ಸುಳ್ಳು ಭರವಸೆ ನೀಡಿ ಅದರ ಹೆಸ ರಲ್ಲಿ ಯುವಕರಿಂದ ಲಕ್ಷಾಂತರ ರೂ. ಪಡೆದು ವಿದೇಶಕ್ಕೆ ಸಾಗಿಸಿ ಬಳಿಕ ವಂಚಿಸು ತ್ತಿದೆಯೆಂದು ಸಿಬಿಐ ತನಿಖೆಯಲ್ಲಿ ಸ್ಪಷ್ಟಗೊಂ ಡಿದೆ. ಈ ಅಂತಾರಾಷ್ಟ್ರೀಯ ಮಾನವ ಕಳ್ಳ ಸಾಗಾಟ ದಂಧೆಯಲ್ಲಿ ಇನ್ನೂ ಹಲವರು ಭಾಗಿಯಾಗಿರುವುದಾಗಿ ಸಿಬಿಐ ಶಂಕಿಸಿದೆ.