ಅಕ್ರಮ ನಾಡಕೋವಿ ನಿರ್ಮಾಣ: ಮತ್ತೆ ಇಬ್ಬರ ಸೆರೆ
ಕಾಸರಗೋಡು: ರಾಜಪುರಂ ಕೋಟೆಕುನ್ನು ಕೈಕುಳನ್ ಕಲ್‌ನಲ್ಲಿ ನಾಡಕೋವಿ ನಿರ್ಮಾಣ ಕೇಂದ್ರ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಇಬ್ಬರನ್ನು ರಾಜಪುರಂ ಪೊಲೀಸರು ಬಂಧಿಸಿದ್ದಾರೆ. ರಾಜ ಪುರಂ ಪಾಲಂಗಲ್‌ನ ಸಂತೋಷ್ ವಿಜಯನ್ (36) ಮತ್ತು ಪರಪ್ಪ ಮುಂಡತ್ತಡ್ಕ ತಾಳೇತ್ತ್ ವೀಟಿಲ್ ಶಾಜಿ (55) ಬಂಧಿತ ಆರೋಪಿಗಳು. ಈ ಪ್ರಕರಣಕ್ಕೆ ಸಂಬಂಧಿಸಿ ರಾಜಪುರಂ, ಆಲಂಕೋಡ್ ಅಲಂಙ ಕಾರ್ತಿಪುರಂನ ಎಂ.ಕೆ. ಅಜಿತ್ ಕುಮಾರ್ (55)ನನ್ನು ಜುಲೈ 9ರಂದು ಬಂಧಿಸಲಾಗಿತ್ತು.