ಅಕ್ರಮ ಮದ್ಯ ಬೇಟೆ ಮುಂದುವರಿಕೆ ಮದ್ಯ, ಗಾಂಜಾ ಸಹಿತ ಇಬ್ಬರ ಸೆರೆ
ಕಾಸರಗೋಡು: ಜಿಲ್ಲೆಯಲ್ಲಿ ಅಕ್ರಮ ಮದ್ಯ ಬೇಟೆ ಕಾರ್ಯಾಚರಣೆಯನ್ನು ಮುಂದುವರಿಸಿರುವ ಅಬಕಾರಿ ತಂಡ ಎರಡೆಡೆಗಳಿಂದ ಕರ್ನಾಟಕ ನಿರ್ಮಿತ ಮದ್ಯ ಮತ್ತು ಗಾಂಜಾ ಪತ್ತೆಹಚ್ಚಿ, ಅದಕ್ಕೆ ಸಂಬAಧಿಸಿ ಇಬ್ಬರನ್ನು ಬಂಧಿಸಿದೆ.
ಕಾಸರಗೋಡು ನೆಲ್ಲಿಕುಂಜೆ ಶಾಂತಿನಗರದಲ್ಲಿ ಕಾಸರಗೋಡು ಅಬಕಾರಿ ಸ್ಪೆಷಲ್ ಸ್ಕ್ವಾಡ್ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಸಿ.ಕೆ.ವಿ. ಸುರೇಶ್ರ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 8.64 ಲೀಟರ್ (180 ಎಂ.ಎಲ್ನ 48 ಟೆಟ್ರಾ ಪ್ಯಾಕೆಟ್) ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬAಧಿಸಿ ಸ್ಥಳೀಯ ರಾಜೇಶ್ ಕೆ.ಕೆ. (34) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ರಾಜೇಶ್ ಪಿ, ಅಶ್ವತಿ ಎ.ವಿ. ಮತ್ತು ಐ.ಬಿ. ಪ್ರಿವೆಂಟೀವ್ ಆಫೀಸರ್ ಬಿಜೋಯ್ ಇ.ಕೆ. ಎಂಬವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದಾರೆ.
ಹೊಸದುರ್ಗ ತಾಲೂಕಿನ ಬಲ್ಲಾ ಗ್ರಾಮದ ಗಾರ್ಡನ್ ವಳಪ್ಪಿನಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 25 ಗ್ರಾಂ ಗಾಂಜಾದೊAದಿಗೆ ಬಲ್ಲಾ ಕಡಪ್ಪುರದ ರಬೀಹ್ ಎಂ.ಪಿ. ಎಂಬಾತನನ್ನು ಬಂಧಿಸಿದೆ. ಆತ ಚಲಾಯಿಸುತ್ತಿದ್ದ ಬೈಕನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಹೊಸದುರ್ಗ ಎಕ್ಸೈಸ್ ಸರ್ಕಲ್ ಇನ್ಸ್ಪೆಕ್ಟರ್ ವಿ.ವಿ. ಪ್ರಸನ್ನ ಕುಮಾರ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಈ ತಂಡದಲ್ಲಿ ಎಇಐ (ಗ್ರೇಡ್) ಎನ್.ಜಿ. ರಘುನಾಥನ್, ಎಂ. ರಾಜೀವನ್, ಪಿ.ಒ. (ಗ್ರೇಡ್) ಬಾಬುರಾಜನ್ ಪಿ.ಕೆ, ಸಿಇಒಗಳಾದ ಮನೋಜ್ ಪಿ, ಸಿಜು ಕೆ. ಮತ್ತು ಅನೀಶ್ ಕೆ.ಪಿ. ಎಂಬವರು ಒಳಗೊಂಡಿದ್ದರು.