ಅಕ್ಷಯ ತೃತೀಯ: ಚೆನ್ನೈಯಲ್ಲಿ ದಾಖಲೆ ಚಿನ್ನಾಭರಣ ಮಾರಾಟ
ಚೆನ್ನೈ: ಅಕ್ಷಯತೃತೀಯದ ಅಂಗವಾಗಿ ಎರಡು ದಿನಗಳೊಳಗೆ ತಮಿಳುನಾಡಿನಲ್ಲಿ 22,000 ಕಿಲೋ ಚಿನ್ನಾಭರಣ ಮಾರಾಟವಾಗಿದೆ. 14,500 ಕೋಟಿ ರೂ.ನಿಂದ 15,000 ಕೋಟಿ ರೂ.ವರೆಗೆ ಆಭರಣ ಮಾರಾಟವಾಗಿದೆ ಎಂದು ಚೆನ್ನೈ ಗೋಲ್ಡ್ ಜ್ಯುವೆಲ್ಲರಿ ಆಂಡ್ ಡೈಮಂಡ್ ಡೀಲರ್ಸ್ ಅಸೋಸಿಯೇಶನ್ ತಿಳಿಸಿದೆ. ಕಳೆದ ವರ್ಷ ಅಕ್ಷಯ ತೃತೀಯ ದಿನದಂದು 11,000 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮಾರಾಟ ಮಾಡಲಾಗಿತ್ತು.