ಅನಧಿಕೃತ ಮೀನುಗಾರಿಕಾ ದೋಣಿಗಳು: ಪರಂಪರಾಗತ ಮೀನುಗಾರರಿಗೆ ಸಂಕಷ್ಟ ದಿನಗಳು
ಮೊಗ್ರಾಲ್: ಪರಂಪರಾಗತ ಮೀನು ಕಾರ್ಮಿಕರಿಗೆ ಸಮಸ್ಯೆ ಉಂಟುಮಾಡುವ ಅನಧಿಕೃತ ಮೀನುಗಾರಿಕೆಗೆ ಫಿಶರೀಸ್ ಇಲಾಖೆ ಅಧಿಕಾರಿಗಳು ನಿಯಂತ್ರಣ ಹೇರಬೇಕೆಂದು ಆಗ್ರಹಿಸಲಾಗಿದೆ. ನಿಷೇಧಿತ ಬಲೆಗಳನ್ನು ಉಪಯೋಗಿಸಿ, ತೀರದಿಂದಲೇ ಬೋಟ್‌ಗಳಲ್ಲಿ ಅನ್ಯರಾಜ್ಯ ಮೀನುಗಾರರು ಮೀನು ಹಿಡಿಯುವುದರಿಂದಾಗಿ ಪರಂಪರಾಗತ ರೀತಿಯಲ್ಲಿ ಮೀನುಗಾರಿಕೆ ನಡೆಸು ವವರಿಗೆ ಮೀನು ಲಭಿಸುತ್ತಿಲ್ಲವೆಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾತ್ರಿ ಕಾಲ ಪಟ್ರೋಲಿಂಗ್ ತೀವ್ರಗೊಳಿಸಬೇಕೆಂದು ಅವರ ಆಗ್ರಹಿಸಿದ್ದಾರೆ.
ಕಳೆದ ಹಲವು ತಿಂಗಳುಗಳಿಂದ ಮೀನುಗಾರರು ಉಪವಾಸದಲ್ಲಿರು ವುದಾಗಿಯೂ, ಹಬ್ಬಗಳು ಕೂಡಾ ಆಚರಿಸಲಾಗದ ಸಂಕಷ್ಟ ಸ್ಥಿತಿಯಲ್ಲಿ ಮೀನುಕಾರ್ಮಿಕರಿದ್ದಾರೆನ್ನಲಾಗಿದೆ. ಧಾರಾಳ ಮೀನು ಲಭಿಸಬೇಕಾದ ಸಮಯದಲ್ಲೇ ಮೀನುಗಳಿಗೆ ಕ್ಷಾಮ ಉಂಟಾಗಿರುವುದು ಮೀನುಗಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭಗೊಳ್ಳಲಿದ್ದು, ಮತ್ತೆ ಮೀನುಗಾರಿಕೆಗೆ ಸಾಧ್ಯವಿಲ್ಲದಾಗಲಿದೆ. ಜೊತೆಗೆ ಟ್ರೋಲಿಂಗ್ ನಿಷೇಧ ಉಂಟಾಗಲಿದೆ. ಪರಂಪರಾಗತ ರೀತಿಯ ಮೀನುಗಾರರಿಗೆ ಮೀನು ಲಭಿಸದ ಕಾರಣ ಅನ್ಯರಾಜ್ಯಗಳಿಂದ ಬರುವ ಹಳೆಯ ಕೊಳೆತ ಮೀನುಗಳನ್ನು ಮಂಜುಗಡ್ಡೆ ಹಾಕಿ ಇಲ್ಲಿನ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ.