ಅಪರಿಚಿತ ವ್ಯಕ್ತಿಯ ಮೃತದೇಹ ರೈಲು ಹಳಿಯಲ್ಲಿ ಪತ್ತೆ
ಕುಂಬಳೆ: ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಕುಂಬಳ ರೈಲು ಹಳಿಯಲ್ಲಿ ಪತ್ತೆಯಾಗಿದೆ. ಕುಂಬಳೆ ರೈಲು ನಿಲ್ದಾಣ ಸಮೀಪ ಇಂದು ಮುಂಜಾನೆ ೩.೩೦ರ ವೇಳೆ ಮೃತದೇಹ ಪತ್ತೆಯಾಗಿದೆ. ಮೃತದೇಹ ಛಿದ್ರಗೊಂಡ ಸ್ಥಿತಿಯಲ್ಲಿದೆ. ಸುಮಾರು ೫೦ ವರ್ಷ ಪ್ರಾಯ ಅಂದಾಜಿಸಲಾಗಿದೆ. ಮೃತದೇಹದಲ್ಲಿ ಲುಂಗಿ ಹಾಗೂ ನೀಲಿ ಗೆರೆಯುಳ್ಳ ಶರ್ಟ್ ಇದೆ. ಇದು ಮುಂಜಾನೆ ೩ ಗಂಟೆಗೆ ಸಂಚರಿಸಿದ ಮರಂತೊ ಎಕ್ಸ್ಪ್ರೆಸ್ ರೈಲು ಢಿಕ್ಕಿ ಹೊಡೆದು ಸಾವು ಸಂಭವಿಸಿ ರಬಹುದೆಂದು ಸಂಶಯಿಸಲಾಗಿದೆ.
ಮೃತದೇಹವನ್ನು ಪೊಲೀಸರು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಿದ್ದಾರೆ.