ಅಪಾಯಭೀತಿ ಸೃಷ್ಟಿಸಿ ರಸ್ತೆ ಮಧ್ಯೆ ವಿದ್ಯುತ್ ಕಂಬ

ಉಪ್ಪಳ: ವಿದ್ಯುತ್ ಕಂಬವೊAದು ನಡು ರಸ್ತೆಯಲ್ಲಿದ್ದು ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸÀÄವ ಬಿsÃತಿ ಇದೆ. ಮಂಗಲ್ಪಾಡಿ ಪಂಚಾಯತ್‌ನ ಉಪ್ಪಳ ವಿದ್ಯುತ್ ಇಲಾಖೆ ವ್ಯಾಪ್ತಿಗೊಳಪಡುವ ಹೆದ್ದಾರಿಯಿಂದ ಕೆಲವೇ ಮೀಟರ್ ದೂರದ ನಯಬಜಾರ್‌ನ ಅಂಬಾರು ರಸ್ತೆಯಲ್ಲಿ ಈ ವಿದ್ಯುತ್ ಕಂಬವಿದ್ದು, ಆತಂಕಕ್ಕೆ ಕಾರಣ ವಾಗುತ್ತಿದೆ. ಈ ಹಿಂದೆ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬ ಹಲವು ವರ್ಷಗಳ ಹಿಂದೆ ರಸ್ತೆ ಅಗಲಗೊಳಿಸಿದಾಗ ಕಂಬವನ್ನು ತೆರವುಗೊಳಿ ಸದ ಕಾರಣ ಇದೀಗ ರಸ್ತೆಯ ಮಧ್ಯ ಭಾಗದಲ್ಲಿ ದೆ. ಹಲವು ಭಾರಿ ತೆರವುಗೊಳಿಸಲು ತಿಳಿಸಿದರೂ ಕ್ರಮಕ್ಕೆ ಮುಂದಾಗಲಿಲ್ಲವೆAದು ಸ್ಥಳೀಯರು ತಿಳಿಸಿದ್ದಾರೆ. ಈ ರಸ್ತೆಯಿಂದ ನೂರಾರು ವಾಹನಗಳು ಸಂಚಾರ ನಡೆಸುತ್ತಿದೆ. ಅಲ್ಲದೆ ಈ ಪರಿಸರದಲ್ಲಿ ಅಗ್ನಿ ಶಾಮಕ ಕೇಂದ್ರ ಕಾರ್ಯಚರಿಸುತ್ತಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿರುವು ದಾಗಿ ದೂರಲಾಗಿದೆ. ಅಪಘಾತಕ್ಕೀಡಾಗಿ ಕಂಬ ಮುರಿದು ಬಿದ್ದಲ್ಲಿ ದುರಂತ ಸಂಭವಿಸಲಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಇಲಾಖೆ ಕಂಬವನ್ನು ಮಧ್ಯಭಾಗದಿಂದ ತೆರವುಗೊಳಿಸಿ ಬದಿಗೆ ಸರಿಸಿ ಸ್ಥಾಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page