ಅಪ್ರಾಪ್ತೆಗೆ ಕಿರುಕುಳ: ವ್ಯಾಪಾರಿ ವಿರುದ್ಧ ಪೋಕ್ಸೋ ಕೇಸು
ಕಣ್ಣೂರು: 14ರ ಹರೆಯದ ಬಾಲಕಿಗೆ ಮಾನಭಂಗ ಗೈದ ವ್ಯಾಪಾರಿ ವಿರುದ್ಧ ಪೋಕ್ಸೋ ಪ್ರಕಾರ ಕೇಸು ದಾಖಲಿಸಲಾಗಿದೆ. ತಳಿಪರಂಬ ಕೂವೇರಿ ಎರಂಗೊಪೊಯಿಲ್ ನಿವಾಸಿ ವತ್ಸನ್ ವಿರುದ್ಧ ತಳಿಪರಂಬ ಪೊಲೀ ಸರು ಕೇಸು ದಾಖಲಿಸಿದ್ದಾರೆ. ಸೆ.22 ರಂದು ಘಟನೆ ನಡೆದಿದೆ. ಲೈಂಗಿಕ ಉದ್ದೇಶದೊಂದಿಗೆ ಬಾಲಕಿಯನ್ನು ಸ್ಪರ್ಶಿಸಿರುವುದಾಗಿ ಹೇಳಲಾಗಿದೆ. ಈ ಬಗ್ಗೆ ಮನೆಯವರಲ್ಲಿ ಬಾಲಕಿ ವಿಷಯ ತಿಳಿಸಿದ್ದು, ಬಳಿಕ ಹೆತ್ತವರು ಅಧಿಕಾರಿ ಗಳಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಲಕಿಯ ಹೇಳಿಕೆ ದಾಖಲಿಸಿದ ಬಳಿಕ ವತ್ಸನ್ ವಿರುದ್ಧ ಕೇಸು ದಾಖಲಿಸಿದ್ದಾರೆ.