ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ: 57ರ ವ್ಯಕ್ತಿ ಸೆರೆ
ಮಂಗಳೂರು: ಪ್ರಾಯ ಪೂರ್ತಿಯಾಗದ ಬಾಲಕಿಯನ್ನು ಸತತವಾಗಿ ದೌರ್ಜನ್ಯಗೈದ 57ರ ಹರೆಯದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂಡಬಿದ್ರಿ ಅಜಂಕಲ್ಲು ನಿವಾಸಿ ಪ್ರಕಾಶ್‌ನನ್ನು ಪೋಕ್ಸೋ ಕಾನೂನು ಪ್ರಕಾರ ಬಂಧಿಸಲಾಗಿದೆ.
ಮೂಡಬಿದ್ರಿಯಲ್ಲಿ ವಾಸಿಸುತ್ತಿ ರುವ ಬಾಲಕಿಯನ್ನು ಈತ ದೌರ್ಜನ್ಯಗೈದಿದ್ದಾನೆನ್ನಲಾಗಿದೆ. ಬಾಲಕಿ ವಾಸಿಸುವ ಮನೆ ಸಮೀಪ ಬಾಡಿಗೆಗೆ ವಾಸ ಮಾಡುತ್ತಿರುವ ಈತ ಬಾಲಕಿ ಮನೆಯಲ್ಲಿ ಏಕಾಂಗಿಯಾಗಿ ರುವಾಗ ಅಲ್ಲಿಗೆ ತೆರಳಿ ದೌರ್ಜನ್ಯಗೈ ಯ್ಯುತ್ತಿದ್ದನೆಂದು ಬಾಲಕಿಯ ಹೆತ್ತವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಮೂಡಬಿದ್ರಿ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.