ಅಪ್ರಾಪ್ತ ಸ್ಕೂಟರ್ ಚಾಲನೆ ಆರ್‌ಸಿ ಮಾಲಕಿಯ ವಿರುದ್ಧ ಕೇಸು

ಮಂಜೇಶ್ವರ: ಅಪ್ರಾಪ್ತರು ವಾಹನ ಚಲಾಯಿಸುತ್ತಿರುವುದು ವ್ಯಾಪಕಗೊಂಡಿದ್ದು, ಇದನ್ನು ನಿಯಂತ್ರಿಸಲು ಮಂಜೇಶ್ವರ ಪೊಲೀ ಸರು ನಿರಂತರ ವಾಹನ ತಪಾಸಣೆ ಹಾಗೂ ಗಸ್ತು ನಡೆಸುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ ಹಲವು ದ್ವಿಚಕ್ರ ವಾಹನಗಳನ್ನು ವಶಕ್ಕೆ ತೆಗೆದು ಆರ್.ಸಿ ಮಾಲಕರ ವಿರುದ್ದ ಕೇಸು ದಾಖಲಿಸಿದ್ದಾರೆ. ನಿನ್ನೆ ರಾತ್ರಿ 7.20ರ ವೇಳೆ ಉಪ್ಪಳ ಬಸ್ ನಿಲ್ದಾಣ ಬಳಿಯಲ್ಲಿ ಎಸ್.ಐ ರತೀಶ್ ನೇತೃತ್ವದಲ್ಲಿ ವಾಹನ ತಪಾಸಣೆ ವೇಳೆ ಈ ದಾರಿಯಾಗಿ ಆಗಮಿಸಿದ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ ಸ್ಕೂಟರ್‌ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಆರ್.ಸಿ ಮಾಲಕಿಯ ವಿರುದ್ದ ಕೇಸು ದಾಖಲಿಸಿದ್ದಾರೆ.

You cannot copy contents of this page