ಅಬಕಾರಿ ಅಧಿಕಾರಿಗಳಿಗೆ ಹಲ್ಲೆ: ಆರೋಪಿಗೆ ಶೋಧ

ಕುಂಬಳೆ: ಮದ್ಯ ಬೇಟೆಗಿಳಿದ ಅಬಕಾರಿ ಅಧಿಕಾರಿಗಳಿಗೆ ಹಲ್ಲೆ ನಡೆಸಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಂತೆ ಕಯ್ಯಾರಿನ ಕಿರಣ್ (೩೦) ಎಂಬಾತನ ವಿರುದ್ಧ ಕುಂಬಳ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಕುಂಬಳ ರೇಂಜ್ ಎಕ್ಸೈಸ್ ಪ್ರಿವೆಂಟೀವ್ ಆಫೀಸರ್ ರಾಜೀವನ್ ನೀಡಿದ ದೂರಿನಂತೆ ಕೇಸು ದಾಖಲಿಸ ಲಾಗಿದೆ. ಮೊನ್ನೆ ಸಂಜೆ ಕಾರ್ಯಾಚರಣೆ ನಡೆಸಿದ ಅಬಕಾರಿ ಅಧಿಕಾರಿಗಳು ಐದೂವರೆ ಲೀಟರ್ ಕರ್ನಾಟಕ ಮದ್ಯ ಸಹಿತ ಕಯ್ಯಾರು ಪೆರಿಯಡ್ಕದ ಸಂದೇಶ್ ಪಿ (೨೧) ಎಂಬಾತನನ್ನು ಬಂಧಿಸಿದ್ದರು.

ಈ ವೇಳೆ ಅಲ್ಲಿಗೆ ತಲುಪಿದ ಕಿರಣ್ ಅಬಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಬಂಧಿತ ಸಂದೇಶ್‌ನನ್ನು ಬಿಡುಗಡೆಗೊಳಿಸಲು ಪ್ರಯತ್ನಿಸಿದ್ದನ. ಬಳಿಕ ಆತ ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾನೆ. ಕಿರಣ್ ನಡೆಸಿದ  ಹಲ್ಲೆಯಿಂದ ಎಕ್ಸೈಸ್ ಐ.ಬಿ  ಪ್ರಿವೆಂಟೀವ್ ಆಫೀಸರ್ ಶ್ರೀನಿವಾಸನ್ ಗಾಯಗೊಂಡಿದ್ದರು. ಕಿರಣ್‌ನ ಪತ್ತೆಗಾಗಿ ಕಾರ್ಯಾಚರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page