ಅಬುದಾಬಿಯಲ್ಲಿ ವಾಹನ ಅಪಘಾತ: ನೆಲ್ಲಿಕುಂಜೆ ನಿವಾಸಿ ಸಾವು
ಕಾಸರಗೋಡು: ಗಲ್ಫ್ ರಾಷ್ಟ್ರವಾದ ಅಬುದಾಬಿಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಕಾಸರಗೋಡು ನೆಲ್ಲಿಕುಂಜೆ ನಿವಾಸಿಯಾಗಿರುವ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ. ನೆಲ್ಲಿಕುಂಜೆ ಬದ್ರಿಯಾ ಹೌಸಿನ ಪಿ.ಎಂ. ಅಬ್ದುಲ್ ಖಾದರ್ -ನಫೀಸಾ ದಂಪತಿ ಪುತ್ರ ಅಯೂಬ್ ಅನ್ಸಾರ್ (43) ಸಾವನ್ನಪ್ಪಿದ ಯುವಕ. ನಿನ್ನೆ ಮುಂಜಾನೆ ಈ ವಾಹನ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಆ ವಾಹನಲ್ಲಿದ್ದ ಸ್ಪೋನ್ಸರ್ಸ್‌ಗಳೂ ಗಾಯಗೊಂಡಿರುವ ಬಗ್ಗೆಯೂ ಮಾಹಿತಿ ಇದೆ. ಈ ಸೋನ್ಸರ್ಸ್ ಗಳು ಹೊಸ ವ್ಯಾಪಾರ ಸಂಸ್ಥೆಯೊಂದನ್ನು ಆರಂಭಿಸುವ ಸಿದ್ಧತೆಯಲ್ಲಿ ತೊಡಗಿದ್ದರು. ಅಬುದಾಬಿಯ ಕಂಪೆನಿಯೊಂ ದರ ಮಾಲಕನ ಪಿ.ಆರ್.ಒ ಆಗಿ ಅಯೂಬ್ ಅನ್ಸಾರ್ ದುಡಿಯುತ್ತಿದ್ದರು. ಇವರ ಮೃತದೇಹವನ್ನು ಊರಿಗೆ ತರುವ ಪ್ರಯತ್ನದಲ್ಲಿ ಸಂಬಂಧಿಕರು ತೊಡಗಿದ್ದಾರೆ.
ಮೃತರು ಹೆತ್ತವರ ಹೊರತಾಗಿ ಪತ್ನಿ ಫಾತಿಮತ್ ತಸ್‌ನಿ, ಮಕ್ಕಳಾದ ಮುಹಮ್ಮದ್ ಆಲಿಂ, ಆಯಿಷಾ ಅಸ್‌ಹಾ, ಸಹೋದರ ಸಹೋದರಿಯರಾದ ಮುಹಮ್ಮದ್, ಹಮೀದ್, ನಾಸರ್, ಬಶೀರ್, ಶಮೀಮಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.