ಅಭಯನಿಕೇತನ್ ಆಶ್ರಯದಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ

ಕಾಸರಗೋಡು: ತಾಳಿಪಡ್ಪು ಭಗವಾನ್ ಸತ್ಯಸಾಯಿ ಅಭಯನಿಕೇ ತನದ ಆಶ್ರಯದಲ್ಲಿ ಸತ್ಯಸಾಯಿ ಬಾಬಾರ ಜನ್ಮ ಶತಾಬ್ದಿ ಆಚರಣೆಯಂಗವಾಗಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಲಾಯಿತು. ಮಾತಾ ಅಮೃತಾನಂದಮಯಿ ಮಠದ ವೇದ ವೇದ್ಯಾಮೃತ ಚೈತನ್ಯ ಸ್ವಾಮೀಜಿ ಉದ್ಘಾಟಿಸಿದರು. ಸತ್ಯಸಾಯಿ ಅಭಯನಿಕೇತನದ ಅಧ್ಯಕ್ಷ ಎಸ್.ಬಿ. ಖಂಡಿಗೆ ಅಧ್ಯಕ್ಷತೆ ವಹಿಸಿದರು. ವಾರ್ಡ್ ಕೌನ್ಸಿಲರ್ ಅಶ್ವಿನಿ ಜಿ. ನಾಕ್, ಉದ್ಯಮಿ ಕೆ. ಸುರೇಶ್, ಓಂ ಪ್ರಕಾಶ್ ಹೂಡೆ, ಸತಾ ಮಾತನಾಡಿ ದರು. ಐದು ಮಹಿಳೆಯರಿಗೆ ಹೊಲಿಗೆ ಯಂತ್ರ ಸ್ವಾಮೀಜಿ ವಿತರಿಸಿದರು. ಬಿಎಸ್‌ಎಸ್ ಅಭಯನಿಕೇತನ್ ಜೊತೆ ಕಾರ್ಯದರ್ಶಿ ಸಿ.ಎನ್. ರಾಮಕೃಷ್ಣ ಸ್ವಾಗತಿಸಿ, ಬಿ. ಪ್ರೇಮ್ ಪ್ರಕಾಶ್ ವಂದಿಸಿದರು.

RELATED NEWS

You cannot copy contents of this page