ಅಭಿಭಾಷಕ ಪರಿಷತ್ ಕುಟುಂಬ ಸಂಗಮ

ಕಾಸರಗೋಡು:  ಭಾರತೀಯ ಅಭಿಭಾಷಕ ಪರಿಷತ್  ಸ್ಥಾಪನಾ ದಿನದಂಗವಾಗಿ ತಾಳಿಪಡ್ಪು ಉಡುಪಿ ಗಾರ್ಡನ್ಸ್‌ನಲ್ಲಿ ಅಭಿಭಾಷಕ ಕುಟುಂಬ ಸಂಗಮ ಜರಗಿತು. ಹಿರಿಯ ನ್ಯಾಯವಾದಿ ಐ.ವಿ. ಭಟ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದರು. ನ್ಯಾಯವಾದಿ ಕರುಣಾಕರನ್ ನಂಬ್ಯಾರ್ ಪ್ರಧಾನ ಭಾಷಣ ಮಾಡಿದರು. ನ್ಯಾಯವಾದಿಗಳಾದ ಉಪಾಧ್ಯಕ್ಷ ಬಿ. ರವೀಂದ್ರನ್, ಎಂ. ನಾರಾಯಣ ಭಟ್, ಪಿ. ಮುರಳೀಧರನ್, ಬೀನಾ ಕೆ.ಎಂ ಮಾತನಾಡಿದರು. ೫೭ನೇ ವಿವಾಹ ವಾರ್ಷಿಕ ದಿನ ಆಚರಿಸುವ ಐ.ಬಿ. ಭ ಟ್ ದಂಪತಿಯನ್ನು ಗೌರವಿಸಲಾ ಯಿತು. ವಿವಿಧ ಪರೀಕ್ಷೆಗಳಲ್ಲಿ ಉನ್ನತ ಜಯ ಗಳಿಸಿದ ಅದ್ವೈತ್ ಕೆ, ಆಶ್ರಿತ ಕೆ.ಜಿ, ಅನಘ ಜಿ.ಕೆ ಎಂಬಿವರನ್ನು ಅಭಿನಂದಿಸಲಾಯಿತು.  ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಓಣಂ ಔತಣಕೂಟ ನಡೆಯಿತು.

You cannot copy contents of this page