ಅರಣ್ಯ ಗಡಿಗಳಲ್ಲಿ ಜನರಿಗೆ ಭಯರಹಿತವಾಗಿ ಜೀವಿಸಲಿರುವ ಸನ್ನಿವೇಶ ಸೃಷ್ಟಿಸುವುದಾಗಿ ಸಚಿವ ಎ.ಕೆ. ಶಶೀಂದ್ರನ್

ಕಾಸರಗೋಡು: ಫಾರೆಸ್ಟ್ ಡಿವಿಜನ್ ವ್ಯಾಪ್ತಿಯಲ್ಲಿ ಆರ್‌ಆರ್‌ಟಿ ಮಂಜೂರು ಗೊಳಿಸುವುದು ಸಕ್ರಿಯ ಪರಿಗಣನೆಯಲ್ಲಿದೆ ಎಂದು ಅರಣ್ಯ ಇಲಾಖೆ ಸಚಿವ ಎ.ಕೆ. ಶಶೀಂದ್ರನ್ ನುಡಿದರು. ಇನ್ನು ಮಂಜೂರಾಗುವ ಮೊದಲ ಆರ್‌ಆರ್‌ಟಿ ಕಾಸರಗೋಡು ಜಿಲ್ಲೆಗಾಗಿರುತ್ತದೆ ಎಂದು ಅವರು ನುಡಿದರು. ಇದಕ್ಕಾಗಿ ಜನಪ್ರತಿನಿಧಿಗಳ ಸಹಕಾರ ಅನಿವಾರ್ಯವಾಗಿದೆ. ಅರಣ್ಯ ವಲಯದಲ್ಲಿರುವ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ೬೪೦ ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಅದರಲ್ಲಿ ಕ್ರಮ ಉಂಟಾಗಲಿಲ್ಲವೆಂದು ಸಚಿವರು ಆರೋಪಿಸಿದರು.

ವೆಳ್ಳರಿಕುಂಡ್ ಮಿನಿ ಸಿವಿಲ್ ಸ್ಟೇಷನ್‌ನಲ್ಲಿ ಅರಣ್ಯ ಇಲಾಖೆಯ ವಿವಿಧ ಯೋಜನೆಗಳ ಉದ್ಘಾಟನೆ ನಿರ್ವಹಿಸಿ ಅವರು ಮಾತನಾಡುತ್ತಿದ್ದರು. ಅರಣ್ಯ ಗಡಿಯಲ್ಲಿ ಜನರಿಗೆ ಭಯವಿಲ್ಲದೆ ಬದುಕಲಿರುವ ಸನ್ನಿವೇಶ ಸೃಷ್ಟಿಸುವುದಾಗಿ ಅವರು ನುಡಿದರು. ಕಾಡು ಪ್ರಾಣಿಗಳ ಆಕ್ರಮಣಕ್ಕೆ ಪರಿಹಾರ ಕಾಣುವುದಕ್ಕಾಗಿ ದೀರ್ಘ ಕಾಲದ ಆಧಾರದಲ್ಲಿರುವ ಹಾಗೂ ಹೃಸ್ವಕಾಲ ಆಧಾರದಲ್ಲಿರುವ ಯೋಜನೆಗಳನ್ನು ಜ್ಯಾರಿಗೊಳಿಸಲಾಗುವುದು.

ವಯನಾಡಿನಲ್ಲೂ, ಕಣ್ಣೂರಿನಲ್ಲೂ ಕಾಲಾನುಸಾರವಾಗಿ ಜ್ಯಾರಿಗೊಳಿಸಬೇ ಕಾದ ಯೋಜನೆಗಳಿಗೆ ರೂಪು ನೀಡಲಾಗಿದೆ. ಇದೇ ರೀತಿಯ ಯೋಜನೆಗಳನ್ನು ಕಾಸರಗೋಡು ಜಿಲ್ಲೆಯಲ್ಲೂ ಆವಿಷ್ಕರಿಸಲಾಗುವುದು. ಜೊತೆಗೆ ಅರಣ್ಯ ಇಲಾಖೆಯ ಅಧಿಕಾ ರಿಗಳಿಗೆ ತರಬೇತಿ ನೀಡುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವು ದು. ಜನರಿಗೆ ಅನುಕೂಲಕರವಾಗಿ ನ್ಯಾಯಾಲ ಯಗಳಿಂದ ಉಂಟಾಗುತ್ತಿರುವ ಆದೇಶಗಳನ್ನು ಜ್ಯಾರಿಗೊಳಿಸುವುದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಡೆಯಾಗಿ ನಿಲ್ಲಬಾರದೆಂದು ಸಚಿವರು ನುಡಿದರು. ಜಿಲ್ಲೆಯಲ್ಲಿ ಪ್ರಸ್ತುತ ಇರುವ ಅರಣ್ಯ ಇಲಾಖೆ ಅಧಿಕಾರಿಗಳನ್ನು ಉಪಯೋಗಿಸಿ ಪ್ರತ್ಯೇಕ ಕ್ಷಿಪ್ರ ಕ್ರಿಯಾ ಸೇನೆಯ ಪ್ರೊಪೋಸಲ್ ನೀಡಿದರೆ ಅಂಗೀಕರಿಸುವುದಾಗಿ ಸಚಿವರು ನುಡಿ ದರು. ಶಾಸಕ ಇ. ಚಂದ್ರಶೇಖರನ್ ಅಧ್ಯ ಕ್ಷತೆ ವಹಿಸಿದರು. ಸಹಾಯಕ ಜಿಲ್ಲಾಧಿಕಾರಿ ಪ್ರತೀಕ್ ಜೈನ್ ಅತಿಥಿಯಾಗಿದ್ದರು. ಹಲವರು ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page