ಅರಿಯಪ್ಪಾಡಿ ಮಾಡ ಶ್ರೀ ಈರ್ವರು ಉಳ್ಳಾಕ್ಲು ದೈವನೇಮೋತ್ಸವ ನಾಳೆಯಿಂದ
ಕನ್ಯಪ್ಪಾಡಿ: ಅರಿಯಪ್ಪಾಡಿ ಮಾಡ ಶ್ರೀ ಈರ್ವರು ಉಳ್ಳಾಕ್ಲು ಹಾಗೂ ಪರಿವಾರ ದೈವಸ್ಥಾನದಲ್ಲಿ ಪ್ರತಿಷ್ಠಾ ದಿನ, ದೈವನೇಮೋತ್ಸವ ವಿವಿಧ ಕಾರ್ಯಕ್ರಮ ಗಳೊಂದಿಗೆ ನಾಳೆಯಿಂದ 23ರ ತನಕ ನಡೆಯಲಿದೆ.
ನಾಳೆ ಪ್ರತಿಷ್ಠಾ ದಿನ ಮಹೋತ್ಸವದಂಗವಾಗಿ ಬೆಳಿಗ್ಗೆ 8ಕ್ಕೆ ಗಣಪತಿಹೋಮ, 9 ಗಂಟೆಗೆ ಮಾಡ ಮಹಾದ್ವಾರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, 10.30ಕ್ಕೆ ಉಗ್ರಾಣ ಮುಹೂರ್ತ, 11 ಗಂಟೆಗೆ ತಂಬಿಲ, ಅನ್ನಸಂತರ್ಪಣೆ, ಭಜನೆ, ಅಪರಾಹ್ನ 2.30ರಿಂದ ಧಾರ್ಮಿಕ ಸಭೆ ನಡೆಯಲಿದೆ. ದೇಲಂಪಾಡಿ ಬ್ರಹ್ಮಶ್ರೀ ಗಣೇಶ ತಂತ್ರಿ, ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಸಹಿತ ಹಲವರು ಭಾಗವಹಿಸುವರು. ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ 4 ಮಂದಿಗೆ ಸನ್ಮಾನ ನಡೆಯಲಿದೆ. 5.30ಕ್ಕೆ ಭಜನೆ, ರಾತ್ರಿ 7ಕ್ಕೆ ದುರ್ಗಾಪೂಜೆ, 8ರಿಂದ ತಂಬಿಲ, ಭಂಡಾರ ಇಳಿಯುವುದು, 9.30ಕ್ಕೆ ತಿರುವಾದಿರ, ಬಳಿಕ ಯೋಗ ಪ್ರದರ್ಶನ ನಡೆಯಲಿದೆ. 22, 23ರಂದು ವಿವಿಧ ಕಾರ್ಯಕ್ರಮಗಳು ಜರಗಲಿದೆ.