ಅವಧಿಗೆ ಮೊದಲೇ ನೈಋತ್ಯ ಮುಂಗಾರು ಪ್ರವೇಶಿಸಲಿದೆ
ನವದೆಹಲಿ: ನೈಋತ್ಯ ಮುಂಗಾರು ಮಾರುತಗಳು ಅವಧಿಗೆ ಮೊದಲೇ ದೇಶಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಅಂಡಮಾನ್ ಸಮುದ್ರ, ಆಗ್ನೇಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೇ 19ರ ಸುಮಾರಿಗೆ ಮುಂಗಾರು ಪ್ರವೇಶಿಸಲಿದೆ. ಬಳಿಕ ಅದು ಜೂನ್ 1ರಂದು ಕೇರಳ ಪ್ರವೇಶಿಸಲಿದೆ. ನಂತರ ಜುಲೈ 15ರ ಸುಮಾರಿಗೆ ಇಡೀ ದೇಶವನ್ನು ಆವರಿಸಲಿದೆ ಎಂದು ಇಲಾಖೆ ತಿಳಿಸಿದೆ. ಜೂನ್ ಮತ್ತು ಸಪ್ಟೆಂಬರ್ ನಡುವಿನಲ್ಲಿ ಮುಂಗಾರು ಮಳೆಯು ದೀರ್ಘಾವಧಿಯ ಸರಾಸರಿ (ಎಲ್ಪಿಎ)ಗಿಂತ ಶೇ. 106ರಷ್ಟು ಸಾಮಾನ್ಯಕ್ಕಿಂತ ಹೆಚ್ಚು ಆಗುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ. ದೇಶಕ್ಕೆ ಮುಂಗಾರು ಮಳೆ ಸಾಮಾನ್ಯವಾಗಿ ಮೇ 22ಕ್ಕೆ ಪ್ರವೇಶಿಸುತ್ತಿದೆ. ಆದರೆ ಈ ಬಾರಿ ಆ ಅವದಿಗಿಂತ ಎರಡು ದಿನಗಳ ಮೊದಲೇ ಮಳೆಗಾಲ ಆರಂಭಗೊ ಳ್ಳಲಿದೆ ಎಂದೂ ಇಲಾಖೆ ಹೇಳಿದೆ.