ಅಸೌಖ್ಯ: ಚಿಕಿತ್ಸೆಯಲ್ಲಿದ್ದ ನಿರ್ಮಾಣ ಕಾರ್ಮಿಕ ನಿಧನ
ಕಾಸರಗೋಡು: ಅಸೌಖ್ಯದಿಂದ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ನಿರ್ಮಾಣ ಕಾರ್ಮಿಕ ಮೃತಪಟ್ಟರು. ಚೌಕಿ ಕೆ.ಕೆ.ಪುರದ ದಿ| ಕುಮಾರನ್ ಎಂಬವರ ಪುತ್ರ ಪುರುಷೋತ್ತಮನ್ (35) ಮೃತಪಟ್ಟ ವ್ಯಕ್ತಿ. ಇವರು ಪ್ರಸ್ತುತ ನಗರದ ಚಕ್ರಬಜಾ ರ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಇವರಿಗೆ ಗಂಭೀರ ಅಸೌಖ್ಯ ಬಾಧಿಸಿತ್ತೆನ್ನಲಾಗಿದೆ. ನಾಲ್ಕು ದಿನಗಳ ಹಿಂದೆ ಅಸೌಖ್ಯ ಉಲ್ಬಣಗೊಂಡ ಇವರನ್ನು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಅವರು ನಿಧನ ಹೊಂದಿದರು. ಮೃತರು ತಾಯಿ ಗೀತ, ಸಹೋದರ- ಸಹೋದರಿಯರಾದ ಚಂದ್ರಶೇಖರನ್, ಪ್ರಕಾಶನ್, ಬಾಲಕೃಷ್ಣನ್, ಭಾರತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.