ಅಸೌಖ್ಯ: ನಿವೃತ್ತ ಶಿಕ್ಷಣಾಧಿಕಾರಿ ನಿಧನ
ಉಪ್ಪಳ: ಐಲ ಕ್ಷೇತ್ರ ಸಮೀಪ ನಿವಾಸಿ, ಧರ್ಮತ್ತಡ್ಕ ಶಾಲೆಯ ನಿವೃತ್ತ ಅಧ್ಯಾಪಕ ಅಶೋಕನ್‌ರ ಪತ್ನಿ ನಿವೃತ್ತ ಶಿಕ್ಷಣಾಧಿಕಾರಿ ಲತಾ.ಕೆ (59) ನಿನ್ನೆ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಮಂಗಲ್ಪಾಡಿ ಸರಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಿ ಕೋದಮಂಗಲದಲ್ಲಿ ಡಿ.ಇ.ಒ ಆಗಿ ನಿವೃತ್ತಿ ಹೊಂದಿದ್ದಾರೆ. ಕಾಸರಗೋಡಿನ ದಿ| ರಾಮಚಂದ್ರ -ದಿ| ರಾಜೀವಿ ದಂಪತಿ ಪುತ್ರಿಯಾಗಿದ್ದಾರೆ. ಮೃತರು ಪತಿ ಪುತ್ರ ಆಶಿತ್‌ಲಾಲ್ (ಯು.ಎಲ್.ಸಿ.ಸಿ ಉದ್ಯೋಗಿ), ಸಹೋದರ ಸಹೋದರಿಯರಾದ ಜಗದೀಶ, ಲಕ್ಷ್ಮೀಕಾಂತ್, ಪುಷ್ಪಾವತಿ, ವಿಜಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಸಹೋದರಿ ವೇದಾವತಿ ಈ ಹಿಂದೆ ನಿಧನ ಹೊಂದಿದ್ದಾರೆ.