ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಕಾಲೇಜು ವಿದ್ಯಾರ್ಥಿನಿ ನಿಧನ
ಕುಂಬಳೆ: ಅಸೌಖ್ಯ ಬಾಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟಳು.
ಮುಗುರೋಡ್ ನಿವಾಸಿ ಮುಹಮ್ಮದ್-ಫೌಸಿಯಾ ದಂಪತಿಯ ಪುತ್ರಿ ಆಯಿಶತ್ ತ್ವಯಿಬ (18) ಮೃತಪಟ್ಟ ವಿದ್ಯಾರ್ಥಿನಿ. ಈಕೆ ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷ ಟ್ರಾವೆಲ್ ಆಂಡ್ ಟೂರಿಸಂ ಮೆನೇಜ್‌ಮೆಂಟ್ ಪದವಿ ವಿದ್ಯಾರ್ಥಿಯಾಗಿದ್ದಳು. ಇತ್ತೀಚೆಗಿನಿಂದ ಈಕೆಗೆ ಅಸೌಖ್ಯ ಬಾಧಿಸಿದ್ದು, ಇದರಿಂದ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈ ಮಧ್ಯೆ ಅಸೌಖ್ಯ ಉಲ್ಭಣಗೊಂಡು ಶನಿವಾರ ರಾತ್ರಿ ಮೃತಪಟ್ಟಳು.
ಮೃತಳು ತಂದೆ, ತಾಯಿ, ಸಹೋದರ-ಸಹೋದರಿಯರಾದ ಮುಹಮ್ಮದ್ ತಮೀಂ, ತನ್ವೀರ್, ತ್ವಾಹಿರ, ತೌಸೀಫ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಳೆ.