ಆಟೋ ಚಾಲಕನಿಗೆ ಹಲ್ಲೆಗೈದ ಆರೋಪಿಗೆ ರಿಮಾಂಡ್
ಕುಂಬಳೆ: ಆಟೋ ಚಾಲಕನಿಗೆ ಸೋಡಾ ಬಾಟ್ಲಿಯಿಂದ ತಲೆಗೆ ಹೊಡೆದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ಬಂಧಿತನಾದ ಆರೋಪಿಗೆ ನ್ಯಾಯಾಲಯ ರಿಮಾಂ ಡ್ ವಿಧಿಸಿದೆ. ಕುಂಬಳೆ ಆಟೋ ಸ್ಟ್ಯಾಂಡ್‌ನ ಚಾಲಕ ಕೊಯಿಪ್ಪಾಡಿ ಕುಂಟಂಗೇರಡ್ಕದ ಸತೀಶ (52) ಎಂಬವರ ಮೇಲೆ ಮೊನ್ನೆ ಸಂಜೆ ಆಕ್ರಮಣ ನಡೆದಿದೆ. ಈ ಪ್ರಕರಣದಲ್ಲಿ ಬಂಧಿತನಾದ ಕೊಯಿಪ್ಪಾಡಿ ವಿಲ್ಲೇಜ್‌ನ ಫಾರೂಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ತನ್ನನ್ನು ಉಚಿತವಾಗಿ ಮನೆಗೆ ತಲುಪಿಸಬೇಕೆಂದು ಫಾರೂಕ್ ಒತ್ತಾಯಿಸಿದ್ದು, ಆದರೆ ಅದಕ್ಕೆ ಆಟೋ ಚಾಲಕ ಸಿದ್ದವಾಗದ ದ್ವೇಷದಿಂದ ಸತೀಶರ ಮೇಲೆ ಫಾರೂಕ್ ಹಲ್ಲೆ ನಡೆಸಿದ್ದಾನೆಂದು ದೂರಲಾಗಿದೆ.