ಆನ್ಲೈನ್ ಟ್ರೇಡಿಂಗ್ ಹೆಸರಲ್ಲಿ 11.60 ಲಕ್ಷ ರೂ. ಪಡೆದು ವಂಚನೆಗೈದ ಬಗ್ಗೆ ಯುವತಿ ದೂರು


ಪುತ್ತಿಗೆ: ಆನ್ಲೈನ್ ಟ್ರೇಡಿಂ ಗ್ನ ಹೆಸರಲ್ಲಿ ಯುವತಿ ಯೋರ್ವೆಯಿಂದ 11,60,397 ರೂ. ಪಡೆದು ಬಳಿಕ ವಂಚನೆಗೈದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಪುತ್ತಿಗೆ ನಿವಾಸಿಯಾಗಿ ರುವ 37ರ ಹರೆಯದ ಯುವತಿ ಈ ದೂರು ನೀಡಿದ್ದು ಅದರಂತೆ ಎಕ್ಸ್-ಟ್ರೇಡ್ ಇಂಟರ್ ನೇಶನಲ್ ಟ್ರೇಡಿಂಗ್ ಕಂಪೆನಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಟ್ರೇಡಿಂಗ್ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಅಮಿತ ಲಾಭ ನೀಡುವುದಾಗಿ ನಂಬಿಸಿ ಮಾರ್ಚ್ 17ರಿಂದ ಎಪ್ರಿಲ್ 29ರ ತನಕದ ಅವಧಿಯ ಹಲವು ದಿನಗಳಲ್ಲಿ ಆನ್ಲೈನ್ ಮೂಲಕ ತಾನು 11,60,397 ರೂ. ಕಳುಹಿಸಿಕೊಟ್ಟೆನೆಂದೂ ಬಳಿಕ ನೀಡಿದ ಹಣವನ್ನಾಗಲೀ, ಲಾಭಾಂಶವನ್ನಾಗಲೀ ನೀಡದೆ ವಂಚಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವತಿ ಆರೋಪಿಸಿದ್ದಾರೆ.

You cannot copy contents of this page