ಆನ್‌ಲೈನ್ ಮೂಲಕ 2.5 ಲಕ್ಷ ರೂ. ಲಪಟಾವಣೆ: ಕೇಸು ದಾಖಲು
ಕಾಸರಗೋಡು: ಆನ್‌ಲೈನ್ ಮೂಲಕ ವ್ಯಾಪಾರದ ಮೂಲಕ ಭಾರೀ ಲಾಭ ಗಿಟ್ಟಿಸಿಕೊಡುವುದಾಗಿ ನಂಬಿಸಿ ಮಹಿಳೆಯಿಂದ ಹಣ ಪಡೆದು ವಂಚಿಸಿದ ದೂರಿನಂತೆ ಎರ್ನಾಕುಳಂ ನಿವಾಸಿ ಮಹಿಳೆಯೋರ್ವೆಯ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ಆರ್‌ಡಿ ನಗರ ನಿವಾಸಿ 40ರ ಹರೆಯದ ಮಹಿಳೆ ಈಬಗ್ಗೆ ದೂರು ನೀಡಿದ್ದು, ಅದರಂತೆ ಎರ್ನಾಕುಳಂ ಕೋದಮಂಗಲ ನಿವಾಸಿ ಅನುಪಮ ಥೋಮಸ್ (35) ವಿರುದ್ಧ ಕೇಸು ದಾಖಲಿಸ ಲಾಗಿದೆ. ಆನ್‌ಲೈನ್ ವ್ಯಾಪಾರದ ಹೆಸರಲ್ಲಿ ಆರೋಪಿ ತನ್ನಿಂದ 2024 ಸೆಪ್ಟಂಬರ್‌ನಲ್ಲಿ ಮೊದಲು ಹಣ ಪಡೆದ ಬಳಿಕ ಅದರ ಲಾಭವನ್ನಾಗಲೀ, ನೀಡಿದ ಹಣವನ್ನು ಹಿಂತಿರುಗಿಸದೆ ತನ್ನನ್ನು ವಂಚಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರ್‌ಡಿ ನಗರದ ಮಹಿಳೆ ಆರೋಪಿಸಿದ್ದಾರೆ.