ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ ಅಶೋಕ್ ಅಂಬಾರ್ ನಿಧನ

ಉಪ್ಪಳ:ಐಲ ಮೈದಾನ ಬಳಿಯ ನಿವಾಸಿ ದಿ| ಶ್ರೀಧರ ಅಂಬಾರ್ ರವರ ಪುತ,್ರ ಆರ್.ಎಸ್.ಎಸ್‌ನ ಹಿರಿಯ ಕಾರ್ಯಕರ್ತ ಅಶೋಕ್ ಅಂಬಾರ್ (56) ನಿಧನ ಹೊಂದಿದ್ದಾರೆ. ನಿನ್ನೆ ಸಂಜೆ ಹೃದಯÁಘಾತ ಉಂಟಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾದರು. ಇವರು ಮಂಗಳೂರಿನಲ್ಲಿ ಪ್ಲಂಬಿAಗ್‌ನ ಗುತ್ತಿಗೆ ದಾರರಾಗಿ ಕೆಲಸ ನಿರ್ವಹಿಸುತಿ ್ತದ್ದರು. ಆರ್.ಎಸ್.ಎಸ್‌ನ ಮುಖ್ಯ ಶಿಕ್ಷಕ್, ಮಂಜೇಶ್ವರ ತಾಲೂಕು ಘೋಷ್ ಪ್ರಮುಖ್‌ರಾಗಿದ್ದರು. ಅಲ್ಲದೆ ಮಂಗಲ್ಪಾಡಿ ಏಕಾಹ ಭಜನಾ ಮಂದಿರ ಟ್ರಸ್ಟಿ, ಚೆರುಗೋಳಿ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ, ಐಲ ವೀರ ಕೇಸರಿ ವ್ಯಾಯಾಮ ಶಾಲೆಯ ಮಾಜಿ ಅಧ್ಯಕ್ಷರು, ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಸಮಿತಿ ಐಲ ಮೈದಾನ ಇದರ ಕಾರ್ಯದರ್ಶಿಯಾಗಿದ್ದರು. ಮೃತರು ತಾಯಿ ಸೀತಾ, ಪತ್ನಿ ವಿದ್ಯಾ, ಮಕ್ಕಳಾದ ಅಶಿತಾ, ಅನೀಶ, ಸಹೋದರಿಯರಾದ ಆಶಾ, ಅನಿತಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಸಂಘ ಪರಿವಾರದ ಪ್ರಮುಖರು, ಕಾರ್ಯ ಕರ್ತರು, ಹಿತೈಷಿಗಳ ಸಹಿತ ನೂರಾರು ಮಂದಿ ಭೇಟಿ ನೀಡಿ ಅಂತಿಮನಮನ ಸಲ್ಲಿಸಿದರು. ನಿಧನಕ್ಕೆ ತರುಣಕಲಾ ವೃಂದ ಐಲ, ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಐಲ ಮೈದಾನ, ಯಂಗ್ ಮೆನ್ಸ್ ಆರ್ಟ್್ಸ ಆ್ಯಂಡ್ ಸ್ಪೋರ್ಟ್್ಸ ಕ್ಲಬ್ ಐಲ ಸಂತಾಪ ಸೂಚಿಸಿದೆ.

RELATED NEWS

You cannot copy contents of this page