ಆರ್ಥಿಕ ಸಂದಿಗ್ಧತೆಯಲ್ಲಿ ಸರಕಾರ: ಒಟ್ಟು ಸಾಲ 6 ಲಕ್ಷ ಕೋಟಿ ರೂ.
ತಿರುವನಂತಪುರ: ರಾಜ್ಯದಲ್ಲಿ ಹಣಕಾಸು ಸಂದಿಗ್ಧತೆ ತೀವ್ರಗೊಂಡಿದ್ದು ಈ ಹಿನ್ನೆಲೆಯಲ್ಲಿ ಈ ತಿಂಗಳು ಮತ್ತೆ 1000 ಕೋಟಿ ರೂಪಾಯಿ ಸಾಲ ತೆಗೆಯಲು ಸರಕಾರ ನಿರ್ಧರಿಸಿದೆ. ಇದರಿಂದ ಈ ಹಣಕಾಸು ವರ್ಷ ಮಾತ್ರ ಸರಕಾರ ಪಡೆಯುವ ಸಾಲದ ಮೊತ್ತ 14,೦೦೦ ಕೋಟಿಗೆ ತಲುಪಲಿದೆ. ಇದೇ ವೇಳೆ ರಾಜ್ಯದ ಒಟ್ಟು ಸಾಲಬಾಧ್ಯತೆ 6 ಲಕ್ಷ ಕೋಟಿಗೇರಲಿದೆ.
ಎಪ್ರಿಲ್, ಮೇ ತಿಂಗಳಲ್ಲಿ 6000 ಕೋಟಿ ರೂ., ಜೂನ್‌ನಲ್ಲಿ ಎರಡು ಬಾರಿಯಾಗಿ 5೦೦೦ ಕೋಟಿ ರೂಪಾಯಿ ಸಾಲ ಪಡೆಯಲಾಗಿದೆ. ಇದರ ಹೊರತಾಗಿ ವಿವಿಧ ರೂಪದಲ್ಲಿ ಸರಕಾರ ನೀಡಲು ಬಾಕಿಯಿರುವ ಮೊತ್ತ ಲಕ್ಷ ಕೋಟಿ ದಾಟಲಿದೆ. ಇದರಲ್ಲಿ ನೌಕರರಿಗೆ, ಪಿಂಚಣಿದಾರರಿಗೆ ನೀಡಲಿರುವ ಮೊತ್ತ, ಕ್ಷೇಮಪಿಂಚಣಿ, ಕೃಷಿಕರಿಗೆ ಸಹಾಯ, ಗುತ್ತಿಗೆದಾರರ ಬಿಲ್‌ಗಳು, ಕ್ಷೇಮನಿಧಿ ಮಂಡಳಿಗಳಿಗೆ ನೀಡಲಿರುವ ಮೊತ್ತ ಒಳಗೊಂಡಿದೆ. ಒಟ್ಟಾರೆಯಾಗಿ ದೈನಂದಿನ ಖರ್ಚಿಗೂ ಸಾಲವನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಲಾಗುತ್ತಿದೆ.