ಆಶ್ರಮದಿಂದ ಮಹಿಳೆ ನಾಪತ್ತೆ

ಮಂಜೇಶ್ವರ: ದೈಗೋಳಿ ಶ್ರೀ ಸಾಯಿನಿಕೇತನ ಸೇವಾಶ್ರಮದಲ್ಲಿದ್ದÀ ಅನ್ಯ ರಾಜ್ಯದ 30 ವರ್ಷ ಪ್ರಾಯದ ಸೋನಾಲಿ ಯಾನೆ ಶಾಂತ ಎಂಬ ಮಹಿಳೆ ಮೇ 29ರಂದು ಸಂಜೆ 4ಗಂಟೆಗೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಆಶ್ರಮದ ಮೆನೇಜರ್ ಅಧೀಶ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮಾನಸಿಕ ಅಸ್ವಸ್ಥ ಹೊಂದಿರುವ ಈಕೆಯನ್ನು ಎರಡು ವರ್ಷಗಳ ಹಿಂದೆ ಕರ್ನಾಟಕದಿಂದ ಪೊಲೀಸರ ನೇತೃತ್ವದಲ್ಲಿ ಸಮಾಜ ಸೇವಕರು ಆಶ್ರಮಕ್ಕೆ ತಲುಪಿಸಿದ್ದರು. ಹಿಂದಿ ಭಾಷೆ ಮಾತ್ರ ಮಾತನಾಡುತ್ತಿ ದ್ದಾರೆ. ಇವರನ್ನು ಯಾರಾದರು ಕಂಡಲ್ಲಿ ಮಂಜೇಶ್ವರ ಪೊಲೀಸ್ ಠಾಣೆ 04998272640 , 9497947263, 9946022468 ನಂಬ್ರದಲ್ಲಿ ತಿಳಿಸಲು ವಿನಂತಿಸಿದ್ದಾರೆ.

You cannot copy contents of this page