ಆಹಾರ ಕಿಟ್: ಕಮಿಶನ್ ರೂಪದಲ್ಲಿ 4.78 ಕೋಟಿ ರೂ. ಬಿಡುಗಡೆ
ತಿರುವನಂತಪುರ: ಕೋವಿಡ್ ಮಹಾಮಾರಿ ವೇಳ ಉಚಿತವಾಗಿ ಆಹಾರಕಿಟ್ ವಿತರಿಸಿದ ವತಿಯಿಂದ ರೇಶನ್ ವ್ಯಾಪಾರಿಗಳಿಗೆ ಕಮಿಶನ್ ರೂಪದಲ್ಲಿ ವಿತರಿಸಲು ಬಾಕಿಯಿದ್ದ 4.78 ಕೋಟಿ ರೂ.ವನ್ನು ರಾಜ್ಯ ಸರಕಾರ ಬಿಡುಗಡೆಗೊಳಿಸಿದೆ. ಈ ಕಮಿಶನ್ ಹಣ ವಿತರಿಸುಲ್ಲಿ ಉಂಟಾದ ವಿಳಂಬ ನೀತಿಯನ್ನು ಪ್ರಶ್ನಿಸಿ ರಾಜ್ಯದ 412 ರೇಶನ್ ವ್ಯಾಪಾರಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿ ನ್ಯಾಯಾಲಯ ನೀಡಿದ ನಿರ್ದೇಶ ಪ್ರಕಾರ ಸರಕಾರ ಈ ಹಣ ಮಂಜೂರು ಮಾಡಿದೆ. ಆದರೆ ಸರಕಾರ ಮಂಜೂರುಮಾಡಿದ್ದು ಒಟ್ಟು ನೀಡಬೇಕಾಗಿದ್ದ ಹಣದ ಕೇವಲ ಶೇ. ೫೦ರಷ್ಟು ಮಾತ್ರವೇ ಆಗಿದೆ. ಕೋವಿಡ್ ಮಹಾಮಾರಿ ಅವಧಿಯಲ್ಲಿ 2020 ಅಕ್ಟೋಬರ್‌ನಿಂದ 2021 ಎಪ್ರಿಲ್ 1ರ ತನಕ ಹಾಗೂ 2021 ಜೂನ್ ಮತ್ತು ಅಗೋಸ್ತ್ ತಿಂಗಳಲ್ಲಿ ರೇಶನ್ ಅಂಗಡಿ ಮೂಲಕ ಉಚಿತ ಆಹಾರ ಕಿಟ್‌ಗಳನ್ನು ವಿತರಿಸಲಾಗಿತ್ತು. ಹೀಗೆ ವಿತರಿಸಲಾದ ಪ್ರತೀ ಕಿಟ್‌ಗಳಿಗೆ ರೇಶನ್ ವ್ಯಾಪಾರಿಗಳಿಗೆ ತಲಾ ಐದು ರೂ.ನಂತೆ ಕಮಿಶನ್ ನಿಗದಿಪಡಿಸಲಾಗಿತ್ತು.