ಇಂದು ಮುಂಜಾನೆ ನಡೆದ ಘಟನೆ: ಲಾರಿ- ಜೀಪು ಢಿಕ್ಕಿ ಹೊಡೆದು ಎರಡು ಸಾವು; ಮೂವರಿಗೆ ಗಂಭೀರ
ಕೋಟಯಂ: ಲಾರಿ ಮತ್ತು ಜೀಪು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸಾವನ್ನಪ್ಪಿ ಮೂವರು ಗಂಭೀರ ಗಾಯಗೊಂಡ ಘಟನೆ ಕೋಟಯಂ ಎಂ.ಸಿ. ರೋಡ್ನಲ್ಲಿ ಇಂದು ಮುಂಜಾನೆ ನಡೆದಿದೆ. ಈ ಅಪಘಾತದಲ್ಲಿ ಜೀಪು ಚಾಲಕ ತೊಡುಪುಳ ನಿವಾಸಿ ಸನೋಷ್ (55) ಹಾಗೂ ಪ್ರಯಾಣಿಕರಾದ ಇಬ್ಬರು ಸಾವನ್ನಪ್ಪಿದ್ದಾರೆ. ಅವರ ಗುರುತು ಪತ್ತೆಹಚ್ಚಲಾಗಿಲ್ಲ.
ಜೀಪಿನಲ್ಲಿದ್ದವರೆಲ್ಲ ಇಂಟೀರಿಯರ್ ವರ್ಕ್ಸ್ ಕಾರ್ಮಿಕರಾಗಿದ್ದಾರೆ. ಬೆಂಗಳೂರಿನಿಂದ ಸರಕು ಹೇರಿಕೊಂಡು ಬರುತ್ತಿದ್ದ ಲಾರಿ ಜೀಪಿನ ಹಿಂದಿನ ಭಾಗಕ್ಕೆ ಢಿಕ್ಕಿ ಹೊಡೆದು ಈ ಅಪಘಾತ ನಡೆದಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಜೀಪು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಗ್ನಿಶಾಮಕ ದಳ ಹಾಗೂ ಚಿಂಗವನಂ ಪೊಲೀಸರು ಆಗಮಿಸಿ ರಕ್ಷಾ ಕಾರ್ಯಾಚರಣೆ ನಡೆಸಿದ್ದಾರೆ.