ಇನ್ನಷ್ಟು ಮೇಲಕ್ಕೆ ನೆಗೆದ ಚಿನ್ನದ ದರ

ಕಾಸರಗೋಡು: ರಾಜ್ಯದಲ್ಲಿ ಚಿನ್ನದ ದರದಲ್ಲಿ ಇನ್ನಷ್ಟು ಏರಿಕೆಯಾಗಿ ಮತ್ತೆ ದಾಖಲೆ ಸೃಷ್ಟಿಸಿದೆ. ಒಂದು ಪವನ್ ಚಿನ್ನಕ್ಕೆ ನಿನ್ನೆಗಿಂತ ಇಂದು 680 ರೂಪಾಯಿಗಳ ಹೆಚ್ಚಳವಾಗಿದೆ. ಇದರಿಂದ ಇಂದು ಒಂದು ಪವನ್ ಚಿನ್ನಕ್ಕೆ 50880 ರೂಪಾಯಿ ಯಾಗಿದೆ. ಒಂದು ಗ್ರಾಂ ಚಿನ್ನದ ದರ 6360 ರೂಪಾಯಿ ಯಾಗಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗು ತ್ತಲೇ ಸಾಗುತ್ತಿದೆ. ಪವನ್‌ಗೆ 50000ಕ್ಕೂ ಮೇಲೇರಿರುವುದು ಗ್ರಾಹಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೆಲೆಯೇರಿಕೆಯಾಗಿರುವುದೇ ರಾಜ್ಯದಲ್ಲೂ ಬೆಲೆಯೇರಿಕೆಗೆ ಕಾರಣ ವಾಗಿದೆಯೆಂದು ಹೇಳಲಾಗುತ್ತಿದೆ.

RELATED NEWS

You cannot copy contents of this page