ಹೊಳೆಯ ಮರಳು ಅಕ್ರಮ ಸಾಗಾಟ: ಸರಕಾರಿ ಮಾಲು ಕದ್ದ ಆರೋಪದಂತೆ 5 ಮಂದಿ ವಿರುದ್ಧ ಪ್ರಕರಣ ದಾಖಲು

ಕುಂಬಳೆ: ಶಿರಿಯ ಹೊಳೆಯಿಂದ ಸರಿಯಾದ ದಾಖಲು ಪತ್ರಗಳಿಲ್ಲದೆ ಸರಕಾರಿ ಮಾಲು ಆಗಿರುವ ಹೊಳೆಯ ಹೊಯ್ಗೆಯನ್ನು ಟಿಪ್ಪರ್ ಲಾರಿಯಲ್ಲಿ ಕದ್ದು ಸಾಗಿಸಿದ ಆರೋಪದಂತೆ, ಲಾರಿ ಚಾಲಕ ಸೇರಿದಂತೆ ಐದು ಮಂದಿಯ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೊಯ್ಗೆ ಹೇರಿದ ಲಾರಿಯನ್ನು  ಪೊಲೀಸರು ವಶಕ್ಕೆ ತೆಗೆದುಕೊಂಡಿ ದ್ದಾರೆ. ಆದರೆ ಆರೋಪಿಗಳು ತಪ್ಪಿಸಿಕೊಂಡಿದ್ದರೆಂದೂ, ಸರಕಾರಿ ಮಾಲು ಆಗಿರುವ ಹೊಳೆ ಹೊಯ್ಗೆ ಕದ್ದು ಸಾಗಿಸಿದ ಆರೋಪದಂತೆ ಇವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ ೫ ಗಂಟೆಗೆ ಹೇರೂರು ಗ್ರಾಮದ ಪಯ್ಯಾರ್ ಕಡವಿನಲ್ಲಿ ಈ ಪೊಲೀಸ್ ಕಾರ್ಯಾಚರಣೆ ನಡೆದಿದೆ.

You cannot copy contents of this page