ಇನ್ನು ಕೇರಳ ಅಲ್ಲ ಕೇರಳಂ
ತಿರುವನಂತಪುರ: ಕೇರಳ ರಾಜ್ಯದ ಅಧಿಕೃತ ಹೆಸರನ್ನು ಕೇರಳ ಬದಲಾಗಿ ಕೇರಳಂ ಎಂದು ಬದಲಾಯಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡುವ ನಿರ್ಣಯವನ್ನು ರಾಜ್ಯ ವಿಧಾನಸಭೆ ನಿನ್ನೆ ಆಡಳಿತ ಮತ್ತು ವಿಪಕ್ಷಗಳು ಅವಿರೋಧವಾಗಿ ಅಂಗೀಕರಿಸಿದೆ.
ಈಗಿರುವ ಕೇರಳ ಎಂಬ ಹೆಸರಲ್ಲಿ ತಿದ್ದುಪಡಿತಂದು ಕೇರಳಂ ಎಂದಾಗಿ ಬದಲಾಯಿಸುವಂತೆ ಕೇಂದ್ರ ಸರಕಾರದೊಂದಿಗೆ ವಿನಂತಿಸುವ ಈ ನಿರ್ಣಯವನ್ನು ಸ್ವತಃ ಮುಖ್ಯಮಂತ್ರಿಯವರೇ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಸರಕಾರಿ ದಾಖಲೆಗಳಲ್ಲಿ ಕೇರಳಂ ಎಂದು ಬಳಕೆಯಾಗುತ್ತಿದ್ದು ಈ ಬದಲಾವಣೆಯಿಂದ ಸಂವಿಧಾನದಲ್ಲಿ ಪ್ರತಿಫಲಿಸುತ್ತಿದೆ ಮತ್ತು ಅಧಿಕೃತವಾಗಿ ಮಲಯಾಳಂ ಮತ್ತು ಇಂಗ್ಲಿಷ್ನಲ್ಲೂ ಬರೆಯಲಾಗುತ್ತದೆ.
ಭಾರತದ ಸಂವಿಧಾನದ ಎಂಟನೇ ಶೆಡ್ಯೂಲ್ ಮತ್ತು ಎಲ್ಲಾ ಅಧಿಕೃತ ದಾಖಲೆಗಳಲ್ಲಿ ಕೇರಳದ ಬದಲು ಕೇರಳಂ ಆಗಿ ಬದಲಾಯಿಸುವಂತೆ ಸದನ ಅಂಗೀಕರಿಸಿದ ನಿರ್ಣಯದಲ್ಲಿ ಕೇಂದ್ರ ಸರಕಾರದೊಡನೆ ವಿನಂತಿಸಲಾಗಿದೆ. ರಾಜ್ಯದ ಹೆಸರು ಮಲಯಾಳಂನಲ್ಲಿ ಕೇರಳಂ ಎಂದೇ ಕರೆಯಲಾಗುತ್ತಿದೆ. ೧೯೫೬ ನವಂಬರ್ ೧ರಂದು ಭಾಷಾವಾರು ಆಧಾರದ ಮೇಲೆ ರಾಜ್ಯ ರಚಿಸಲಾಯಿತು. ಮಲಯಾಳಂ ಮಾತನಾಡುವ ಎಲ್ಲಾ ಜನರಿಗೆ ಅಖಂಡ ಕೇರಳ ರಾಜ್ಯ ರಚಿಸಲಾ ಗಿದ್ದು, ಸಂವಿಧಾನದ ಮೊದಲ ಶೆಡ್ಯೂಲ್ನಲ್ಲಿ ರಾಜ್ಯದ ಹೆಸರನ್ನು ಕೇರಳ ಎಂದು ನಮೂದಿಸ ಲಾಗಿದೆ. ಅದನ್ನು ಬದಲಾಯಿಸಿ ರಾಜ್ಯದ ಅಧಿಕೃತ ಹೆಸರನ್ನು ಎಲ್ಲಾ ಅಧಿಕೃತ ಭಾಷೆಗಳಲ್ಲಿ ಕೇರಳಂ ಎಂದು ಬದಲಾಯಿಸಲುಸಂವಿಧಾನದ ಎಂಟನೇ ಶೆಡ್ಯೂಲ್ ಅಡಿಯಲ್ಲಿ ತಿದ್ದುಪಡಿಗಳನ್ನು ಮಾಡುವಂತೆ ರಾಜ್ಯ ವಿಧಾನಸಭೆಯು ಕೇಂದ್ರ ಸರಕಾರ ದೊಡನೆ ಸರ್ವಾನುಮತದಿಂದ ವಿನಂತಿಸುತ್ತಿದೆಯೆಂದು ನಿರ್ಣಯ ಮಂಡಿಸುವಾಗ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿವರಿಸಿದರು.