ಇನ್‌ಸ್ಟಾಗ್ರಾಂನಲ್ಲಿ ಪರಿಚಯಗೊಂಡ ಬಾಲಕಿಯ ನಗ್ನ ಫೊಟೋ ಪಡೆದು ಬೆದರಿಕೆ: ಕಾಸರಗೋಡು ನಿವಾಸಿ ವಿರುದ್ಧ ಪೋಕ್ಸೋ ಕೇಸು ದಾಖಲು
ಕಾಸರಗೋಡು: ಇನ್ ಸ್ಟಾಗ್ರಾಂನಲ್ಲಿ ಪರಿಚಯಗೊಂಡ 16ರ ಹರೆಯದ ಬಾಲಕಿಯನ್ನು ಪುಸಲಾಯಿಸಿ ಆಕೆಯ ನಗ್ನ ಫೊಟೋ ಪಡೆದುಕೊಂಡ ಬಳಿಕ ಅದರ ಹೆಸರಲ್ಲಿ ಆಕೆಗೆ ಬೆದರಿಕೆಯೊಡ್ಡಿದ ದೂರಿನಂತೆ ಕಾಸರಗೋಡು ನಿವಾಸಿ ಯಾಗಿರುವ ಯುವಕನ ವಿರುದ್ಧ ನೀಲೇಶ್ವರ ಪೊಲೀಸರು ಪೋಕ್ಸೋ, ಐ.ಟಿ ಆಕ್ಟ್ ಮತ್ತಿತರ ಸೆಕ್ಷನ್‌ಗಳ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಸರಗೋಡು ನಿವಾಸಿ ಕೈಲಾಸ್ ಎಂಬಾತನ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ತನ್ನನ್ನು ಪರಿಚಯಗೊಂಡ ಆರೋಪಿ ಬಳಿಕ ನನ್ನ ನಗ್ನ ಫೊಟೋ ಕೇಳಿ ಪಡೆದ ನಂತರ ಅದನ್ನು ತೋ ರಿಸಿ ನನಗೆ ನಂತರ ಬೆದರಿಕೆ ಒಡ್ಡಲಾರಂಭಿಸಿದನೆಂದು ೧೬ರ ಬಾಲಕಿಯೋರ್ವೆ ನೀಲೇಶ್ವರ ಪೊಲೀಸರಿಗೆ ದೂರು ನೀ ಡಿದ್ದಾಳೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.