ಇಬ್ಬರು ಯುವತಿಯರು ನಾಪತ್ತೆ

ಕಾಸರಗೋಡು: ನೀಲೇಶ್ವರ, ಚೀಮೇನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಯುವತಿಯರು ನಾಪತ್ತೆಯಾದ ಬಗ್ಗೆ ದೂರಲಾಗಿದೆ.  ಎರಡು ಘಟನೆಗಳಿಗೆ ಸಂಬಂಧಿಸಿ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಕರಿಂದಳ  ಕೀಳ್‌ಮಾಲ  ಕುರುವಾಟ್ ಹೌಸ್‌ನ ಐಶ್ವರ್ಯ (29) ಎಂಬಾಕೆ ನಿನ್ನೆ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದಾಳೆ. ಬೆಳಿಗ್ಗೆ 10 ಗಂಟೆಗೆ ನೀಲೇಶ್ವರ ತಳಿಯಿಲ್ ಕ್ಷೇತ್ರಕ್ಕೆ ಹೋಗುವುದಾಗಿ ತಿಳಿಸಿ ಐಶ್ವರ್ಯ ತನ್ನ ಸ್ಕೂಟರ್‌ನಲ್ಲಿ ಮನೆಯಿಂದ ತೆರಳಿರುವುದಾಗಿ ತಂದೆ ಕೆ. ಕೃಷ್ಣನ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.  ಈ ಬಗ್ಗೆ ನೀಲೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಚೀಮೇನಿಯಲ್ಲಿ ಕ್ಲಾಯಿಕ್ಕೋಡ್ ಮುಳಕ್ಕೋಮ್ ವಡಕ್ಕೇಕರದ ಸುನಿಲ್ ಎಂಬವರ ಪತ್ನಿ ಕೆ.ಟಿ. ಬೀನಾ (40) ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ನಿನ್ನೆ ಬೆಳಿಗ್ಗೆ ಮಗುವನ್ನು ಅಂಗನವಾಡಿಗೆ ತಲುಪಿಸಿದ ಬಳಿಕ ಮನೆಗೆ ಮರಳಿ ಬಂದಿದ್ದು ಅನಂತರ ಮುಳಕ್ಕೋಂ ಎಂಬಲ್ಲಿನ ಕೆಲಸ ಸ್ಥಳಕ್ಕೆ ಹೋಗುವುದಾಗಿ ತಿಳಿಸಿ ತೆರಳಿದ್ದಳು. ಬಳಿಕ ಮರಳಿ ಬಾರದ ಹಿನ್ನೆಲೆಯಲ್ಲಿ ಪತಿಯ ಸಹೋದರ ಸತೀಶನ್ ನೀಡಿದ ದೂರಿನಂತೆ ಚೀಮೇನಿ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page