ಉಕ್ಕಿನಡ್ಕ ವಸಿಷ್ಠಾಶ್ರಮ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ, ನೂತನ ಕಟ್ಟಡ ಸುಜ್ಞಾನ ಮಂದಿರ ಉದ್ಘಾಟನೆ ನಾಳೆಯಿಂದ

ಪೆರ್ಲ: ಉಕ್ಕಿನಡ್ಕದ ವಸಿಷ್ಠಾಶ್ರಮ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ನೂತನ ಸುಸಜ್ಜಿತ ಕಟ್ಟಡ, ಅತ್ಯಾಧುನಿಕ ಸಲಕರಣೆಗಳ ತರಗತಿ ಕೋಣೆ, ಮಾಹಿತಿ ತಂತ್ರಜ್ಞಾನ ಕೊಠಡಿ, ಆಟದ ಮೈದಾನ, ಸುಜ್ಞಾನ ಕೇಂದ್ರದ ಉದ್ಘಾಟನೆ ಕಾರ್ಯಕ್ರಮ ನಾಳೆ, 17ರಂದು ನಡೆಯಲಿದೆ.
ನಾಳೆ ಬೆಳಗ್ಗೆ ಗಣಪತಿ ಹೋಮ ಜರಗಲಿದೆ. ವಸಿಷ್ಠಾಶ್ರಮ ಸಂಘದ ಅಧ್ಯಕ್ಷ ಡಾ.ಪಿ.ಕೆ. ಶಂಕರನಾರಾಯಣ ಭಟ್ ಧ್ವಜಾರೋಹಣ ನೆರವೇರಿಸಿ ಶತಮಾನೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ಕಾಂಚೀಪುರA ಶ್ರೀ ಕಂಚಿ ಕಾಮಕೋಟಿ ಪೀಠದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕ ರಾಚಾರ್ಯ ಸ್ವಾಮೀಜಿ, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು.
11 ಗಂಟೆಗೆ ಡಾ.ಪಿ.ಕೆ. ಶಂಕರನಾರಾಯಣ ಭಟ್ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಾಂಚೀಪುರA ಮತ್ತು ಎಡನೀರು ಸ್ವಾಮೀಜಿ ಆಶೀರ್ವಚನ ನೀಡುವರು. ಪಿ.ಜಿ. ಶಂಕರನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡುವರು. ರೂಪಾ ಬಾಳಿಗ, ಎಣ್ಮಕಜೆ ಪಂ. ಅಧ್ಯಕ್ಷ ಸೋಮಶೇಖರ ಜೆ.ಎಸ್., ಕರ್ನಾಟಕ ಗಡಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅತಿಥಿಗಳಾಗಿ ಭಾಗವಹಿಸುವರು. ಕುಂಬಳೆ ಉಪ ಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ್, ಉಕ್ಕಿನಡ್ಕ ಸಹಸ್ರಾಕ್ಷ ವೈದ್ಯ ಶಾಲೆಯ ಡಾ.ಜಯಗೋವಿಂದ ಉಕ್ಕಿನಡ್ಕ, ಕೊಲ್ಲೂರು ಕ್ಷೇತ್ರದ ಪ್ರಧಾನ ಆರ್ಚಕ ಗೋವಿಂದ ಅಡಿಗಳು, ಮುಖ್ಯಶಿಕ್ಷಕಿ ಗೀತಾ ಎ., ಸಿಬ್ಬಂದಿ ಕಾರ್ಯದರ್ಶಿ ಅಮಿತಾ, ಶಾಲಾ ಸಹಶಿಕ್ಷಕ ಹರೀಶ್ ಗೋಳಿತ್ತಡ್ಕ, ಶಿಕ್ಷಕಿ ರಾಜೇಶ್ವರಿ ಉಪಸ್ಥಿತರಿರುವರು.
17ರಂದು ಸಂಜೆ 3.30ಕ್ಕೆ ಶಾಸಕ ರಾದ ಎನ್.ಎ.ನೆಲ್ಲಿಕುನ್ನು, ಎ.ಕೆ.ಎಂ. ಆಶ್ರಫ್, ಅಶೋಕ್ ಕುಮಾರ್ ರೈ, ಎಣ್ಮಕಜೆ ಪಂ. ಅಧ್ಯಕ್ಷ ಸೋಮಶೇಖರ ಜೆ.ಎಸ್., ಬೆಂಗಳೂರು ವಿಭಾಗ ಪೊಲೀಸ್ ವರಿಷ್ಠಾಧಿಕಾರಿ ಸೈಮೋನ್ ಉಪಸ್ಥಿತರಿರುವರು. ಎಣ್ಮಕಜೆ ಪಂ. ಉಪಾಧ್ಯಕ್ಷೆ ರಮ್ಲಾ ಇಬ್ರಾಹಿಂ ಅಧ್ಯಕ್ಷತೆ ವಹಿಸುವರು. ಶಾಲೆ ವ್ಯವಸ್ಥಾಪಕ ಪಿ.ಜಿ.ಶಂಕರನಾರಾಯಣ ಭಟ್, ಉಕ್ಕಿನಡ್ಕ ಸಹಸ್ರಾಕ್ಷ ವೈದ್ಯ ಶಾಲೆಯ ಡಾ.ಸಪ್ನಾ ಜಯಗೋವಿಂದ, ಶಾಲಾ ಪಿಟಿಎ ಅಧ್ಯಕ್ಷ ಫಝಲ್ ಪಳ್ಳಿಕುಂಞÂ, ಕುಂಬಳೆ ಬಿಆರ್ ಸಿಯ ಜಯರಾಮ ಜೆ., ಉದ್ಯಮಿ ಸಿದ್ದಿಕ್ ಖಂಡಿಗೆ, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಮಧುಸೂದನ ಕಂಗಿಲ, ಹಿರಿಯ ಶಿಕ್ಷಕ ರಾಜೀವನ್ ಪಿ., ಸಹ ಶಿಕ್ಷಕ ಬಶೀರ್ ಟಿ.ಕೆ., ಮುಖ್ಯ ಶಿಕ್ಷಕಿ ಗೀತಾ ಎ. ಉಪಸ್ಥಿತರಿರುವರು. ಸಂಜೆ 6ರಿಂದ ಶಾಲೆ, ಅಂಗನವಾಡಿ ಮಕ್ಕಳು, ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

You cannot copy contents of this page