ಉದ್ಯೋಗ ಆಮಿಶವೊಡ್ಡಿ ಆನ್ಲೈನ್ ಮೂಲಕ 14 ಲಕ್ಷ ರೂ. ಎಗರಿಸಿದ ಬಗ್ಗೆ ದೂರು


ಕಾಸರಗೋಡು: ಪಾರ್ಟ್ ಟೈಂ ಉದ್ಯೋಗ ನೀಡುವುದಾಗಿ ನಂಬಿಸಿ ಆನ್ಲೈನ್ ಮೂಲಕ 14,08,835 ರೂ. ಲಪಟಾಯಿಸಿದ ಬಗ್ಗೆ ಯುವಕನೋರ್ವ ಮೇಲ್ಪರಂಬ ಪೊಲೀಸರಿಗೆ ದೂರು ನೀಡಿದ್ದಾರ.
ಚೆಂಬರಿಕ ನಿವಾಸಿಯಾಗಿರುವ 32ರ ಹರೆಯದ ಯುವಕ ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಪಾರ್ಟ್ ಟೈಂ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ವಂಚನೆಗಾರರು ತನ್ನಿಂದ ಡಿಸೆಂಬರ್ 25ರಿಂದ ಜನವರಿ 16ರ ನಡುವಿನ ಅವಧಿಯಲ್ಲಿ ಆನ್ಲೈನ್ ಮೂಲಕ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಹಣ ಪಡೆದು ಬಳಿಕ ಉದ್ಯೋಗವನ್ನಾಗಲೀ, ನೀಡಿದ ಹಣವನ್ನಾಗಲೀ ಹಿಂತಿರುಗಿಸದೆ ವಂಚಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವಕ ತಿಳಿಸಿದ್ದಾನೆ.

You cannot copy contents of this page