ಉದ್ಯೋಗ ಭರವಸೆಯೊಡ್ಡಿ ಹಲವರಿಗೆ ವಂಚನೆ : ತಲೆಮರೆಸಿಕೊಂಡ ಮಹಿಳೆ ಉಪ್ಪಿನಂಗಡಿಯಲ್ಲಿ ಸೆರೆ

ಕಾಸರಗೋಡು: ಯು.ಕೆ.ಯಲ್ಲಿ ಉದ್ಯೋಗ ಭರವಸೆಯೊಡ್ಡಿ ಹಲವರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿ ತಲೆಮರೆಸಿಕೊಂಡಿದ್ದ ಮಹಿಳೆಯನ್ನು ಕರ್ನಾಟಕದ ಉಪ್ಪಿನಂಗಡಿಯಿಂದ ಸೆರೆ ಹಿಡಿಯಲಾಗಿದೆ. ಕಣ್ಣೂರು ಪಯ್ಯನ್ನೂರು ವಲಿಯಪರಂಬು ನಿವಾಸಿ ಮಿನಿಮೋಳ್ ಮ್ಯಾಥ್ಯು (೫೮) ಎಂಬಾಕೆ ಸೆರೆಗೀಡಾದ ಆರೋಪಿಯಾಗಿದ್ದಾಳೆ.

ಮೂಲತಃ ತೃಶೂರಿನ ಕೂಮಂಜೇರಿ ನಿವಾಸಿಯಾದ ಈಕೆ ಕಣ್ಣೂರು ವಲಯ ಪರಂಬದಲ್ಲಿ ವಾಸಿಸಿ ಹಲವರನ್ನು ಭೇಟಿ ಯಾಗಿ ಅವರಿಗೆ ಕೆನಡಾದಲ್ಲಿ ಉದ್ಯೋಗ ವೀಸಾ ದೊರಕಿಸಿಕೊಡುವುದಾಗಿ ತಿಳಿಸಿ ಲಕ್ಷಾಂತರ ರೂಪಾಯಿ  ಪಡೆದುಕೊಂಡಿ ರುವುದಾಗಿ ಹೇಳಲಾಗುತ್ತಿದೆ. ಒಳಿಕ್ಕಲ್ ಕೂಮಂತೋಟ್‌ನ ಆಶಿದಾ ಜೋನ್ ಎಂಬವರಿಂದ ೧೪ ಲಕ್ಷ ರೂ, ಆರಳಂನ ಚಾಕೋರಿಂದ ೧೩ ಲಕ್ಷ ರೂಪಾಯಿ ಈಕೆ ಪಡೆದು ಬಳಿಕ ತಲೆಮರೆಸಿಕೊಂಡಿದ್ದಾ ಳೆಂದು ಹೇಳಲಾಗುತ್ತಿದೆ. ಇದರಂತೆ ಲಭಿಸಿದ ದೂರಿನಂತೆ ಒಳಿಕ್ಕಲ್ ಪೊಲೀ ಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿ ದ್ದಾಗ ಈಕೆ ಉಪ್ಪಿನಂಗಡಿಯಲ್ಲಿರುವುದಾಗಿ ತಿಳಿದು ಬಂದಿದೆ. ಇದರಂತೆ ಒಳಿಕ್ಕಲ್ ಸಿ.ಐ ಕೆ. ಸುಧೀರ್ ನೇತೃತ್ವದ ಪೊಲೀಸರು ಉಪ್ಪಿನಂಗಡಿಗೆ ತಲುಪಿ ಮಿನಿಮೋಳ್ ಮ್ಯಾಥ್ಯುವನ್ನು ಬಂಧಿಸಿದ್ದಾರೆ. ಇದೇ ವೇಳೆ ಈಕೆಯ ಮಗಳು ಶ್ವೇತಾ ಮ್ಯಾಥ್ಯು ಕೂಡಾ ವಂಚನೆ ನಡೆಸಿ ತಲೆಮರೆಸಿ ಕೊಂಡಿರುವುದಾಗಿ ದೂರಲಾಗಿದೆ. ತೃಶೂರಿನಲ್ಲಿ ಆನ್‌ಲೈನ್ ಸಂಸ್ಥೆ ಆರಂಭಿಸಿ ಆ ಮೂಲಕ ೫ ಲಕ್ಷ ರೂಪಾಯಿ ಲಪಟಾಯಿಸಿರುವುದಾಗಿ ಈಕೆ ವಿರುದ್ಧ ದೂರಲಾಗಿದೆ.

Leave a Reply

Your email address will not be published. Required fields are marked *

You cannot copy content of this page