ಉಪ್ಪಳದಲ್ಲಿ ಭಾರೀ ಪ್ರಮಾಣದ ತ್ಯಾಜ್ಯಕ್ಕೆ ಬೆಂಕಿ: ಸ್ಥಳೀಯರಲ್ಲಿ ಆತಂಕ
ಉಪ್ಪಳ: ಉಪ್ಪಳ ಬಸ್ ನಿಲ್ದಾಣ ಸಮೀಪ ಖಾಸಗಿ ವ್ಯಕ್ತಿಯ ಖಾಲಿ ಸ್ಥಳದಲ್ಲಿ ಉಪೇಕ್ಷಿಸಲಾದ ಭಾರೀ ಪ್ರಮಾಣದ ತ್ಯಾಜ್ಯ ರಾಶಿಗೆ ಬೆಂಕಿ ಹಚ್ಚಿ ಉರಿಸಿದ ಘಟನೆ ನಡೆದಿದೆ. ಇದ ರಿಂದ ಅದರ ದುರ್ವಾಸನೆ ಹಾಗೂ ಹೊಗೆಯಿಂದ ಪರಿಸರ ನಿವಾಸಿಗಳು ಆತಂಕಗೊAಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಘಟನೆ ನಡೆದಿದೆ. ಎರಡು ದಿನಗಳ ತನಕ ಉಪ್ಪಳ ಅಗ್ನಿ ಶಾಮಕ ದಳ ಬೆಂಕಿಯನ್ನು ನಂದಿಸಿತ್ತು. ಇದೀಗ ಹೊಗೆಯೇಳುತ್ತಿದೆ. ಈ ಪರಿಸರದಲ್ಲಿ ಪ್ಲಾಟ್ ಸಹಿತ ಹಲವು ಮನೆಗಳಿವೆ. ಇಲ್ಲಿ ಭಾರೀ ಪ್ರಮಾಣದ ತ್ಯಾಜ್ಯಗಳು ಇನ್ನೂ ಉಳಿದುಕೊಂಡಿದ್ದು, ಇದನ್ನು ಉರಿಸಿದಲ್ಲಿ ಸ್ಥಳೀಯರಿಗೆ ಆರೋಗ್ಯ ಸಮಸ್ಯೆ ಉಂಟಾಗಲಿದೆ. ಈ ಪರಿಸರದಲ್ಲಿರುವ ಸಿಸಿ ಕ್ಯಾಮರವನ್ನು ಸಂಬAಧಪಟ್ಟ ಅಧಿಕಾರಿಗಳು ತಪಾ ಸಣೆ ನಡೆಸಿ ತ್ಯಾಜ್ಯವನ್ನು ಉರಿಸಿದವರ ವಿರುದ್ದ ಕ್ರಮಕ್ಕೆ ಮುಂದಾಗಬೇಕೆAದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ವೀಸ್ ರಸ್ತೆ, ಒಳ ರಸ್ತೆಗಳಲ್ಲಿ ವ್ಯಾಪಕವಾಗಿ ತ್ಯಾಜ್ಯವನ್ನು ಉಪೇಕ್ಷಿಸುವ ಕೃತ್ಯ ನಡೆಯುತ್ತಿದ್ದು, ಇದಕ್ಕೆ ನಿಯಂತ್ರಣ ಹೇರಬೇಕೆಂದು ಒತ್ತಾಯಿಸಲಾಗಿದೆ.