ಉಪ್ಪಳ ಗ್ರಾಂಡ್ ಎಕ್ಸ್ಪೋ ೨೨ರಿಂದ
ಕುಂಬಳೆ: ಯೂನಿವೆಂಟ್ ಇವೆಂಟ್ ಮೆನೇಜ್ಮೆಂಟ್ ಡಿ. ೨೨ರಿಂದ ಜನವರಿ ೮ರವರೆಗೆ ಕೈಕಂಬದಲ್ಲಿ ಎಕ್ಸಿಬಿಷನ್ ನಡೆಸಲಿದೆ. ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸುವರು. ಫ್ಲವರ್ ಶೋ, ಇಂಟರ್ನೇಶನಲ್ ಪೆಟ್ ಶೋ, ವೇದಿಕೆ ಕಾರ್ಯಕ್ರಮಗಳು, ನರ್ಸರಿಗಳು, ವಿವಿಧ ರೀತಿಯ ಸ್ಟಾಲ್ಗಳನ್ನು ಎಕ್ಸ್ಪೋದ ಅಂಗವಾಗಿ ನಡೆಸಲಾಗುವುದು. ರೈಡ್ಗಳಿರುವುದು. ಮಕ್ಕಳಿಗೆ ಟಿಕೆಟ್ನಲ್ಲಿ ರಿಯಾಯಿತಿ ಲಭಿಸಲಿದೆ ಯೆಂದು ಸಂಬಂಧಪಟ್ಟವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ನವಾಸ್ ಎನ್, ಇಬ್ರಾಹಿಂ ಖಲೀಲ್, ಸಕೀರ್ ಹುಸೈನ್, ಸಕರಿಯ ಭಾಗವಹಿಸಿದರು.