ಐಎಪಿಯಿಂದ ಶಿಶುರೋಗ ತಜ್ಞರಿಗಾಗಿ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ

ಕಾಸರಗೋಡು: ಐಎಪಿ ಕಾಸರಗೋಡು ಶಾಖೆಯ ನೇತೃತ್ವದಲ್ಲಿ ಶಿಶು ರೋಗ ತಜ್ಞರಿಗಾಗಿ ‘ಫ್ಯೂಯೆಲ್’ ಎಂಬ ಹೆಸರಲ್ಲಿ  ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ನಡೆಯಿತು. ಕಾಸರಗೋಡು ಸಿಟಿ ಟವರ್ ಹೋಟೆಲ್‌ನಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಶಿಶು ರೋಗ ತಜ್ಞರು, ಫಿಸೀಶಿಯನ್‌ಗಳು, ಜನರಲ್ ಪ್ರಾಕ್ಟೀಶನರ್‌ಗಳು ಹಾಗೂ ಮಂಗಳೂರಿನ ಪೀಡ್ರಿಯಾಟಿಕ್ಸ್ ಪೋಸ್ಟ್ ಗ್ರಾಜ್ಯುವೆಟ್ ವಿದ್ಯಾರ್ಥಿಗಳು ಪಾಲ್ಗೊಂಡರು. ಐಎಪಿ ಕಾಸರಗೋಡು ಘಟಕ ಅಧ್ಯಕ್ಷ ಡಾ| ಮಾಹಿನ್ ಪಿ. ಅಬ್ದುಲ್ಲ ಸ್ವಾಗತಿಸಿದರು.  ಹಿರಿಯ ಶಿಶುರೋಗ ತಜ್ಞ ಡಾ| ನಾರಾಯಣ ನಾಯ್ಕ್ ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ವೈದ್ಯರುಗಳಾದ ಡಾ| ಯತೀಶನ್ ಕೆ.ಕೆ, ಡಾ| ಎಸ್.ವಿ.ಆರ್ ಶರ್ಮ, ಡಾ| ಮುಸ್ತಫ, ಡಾ| ರಾಫಿ ಅಹಮ್ಮದ್ ಉಪಸ್ಥಿತರಿದ್ದರು.  ಡಾ| ಜೋನಿ ಸೆಬಾಸ್ಟಿಯನ್, ಡಾ| ನಿತ್ಯಾ ಟಿ, ಡಾ| ಅಮರೇಶ್ ಪಾಟೀಲ್, ಡಾ| ನಂದಿನಿ  ವಿವಿಧ ವಿಷಯಗಳ ಕುರಿತು ತರಗತಿ ನಡೆಸಿದರು.  ಐಎಪಿ ಕಾಸರಗೋಡು ಘಟಕ ಕಾರ್ಯದರ್ಶಿ ಡಾ| ಉದಯ ಶ್ರೀನಿವಾಸ್ ವಂದಿಸಿದರು.

RELATED NEWS

You cannot copy contents of this page