ಪಟಾಕಿ ಸಿಡಿಸಿದಾಗ ಮದುವೆ ಮನೆಯ ಚಪ್ಪರಕ್ಕೆ ಹತ್ತಿಕೊಂಡ ಬೆಂಕಿ: ತಪ್ಪಿದ ಭಾರೀ ದುರಂತ

ಕಾಸರಗೋಡು: ವರನ ಸಹಿತ ಮದುವೆ ತಂಡ ತಲುಪಿದಾಗ  ಸಿಡಿಸಿದ ಪಟಾಕಿಯಿಂದ ಬೆಂಕಿ ಹತ್ತಿಕೊಂಡು ವಧುವಿನ ಮನೆಯಲ್ಲಿ ನಿರ್ಮಿಸಿದ ಚಪ್ಪರ  ಉರಿದು ನಾಶಗೊಂಡ ಘಟನೆ ನಡೆದಿದೆ. ಚಪ್ಪರದ ಒಂದು ಭಾಗ ಹಾಗೂ ಅಲಂಕಾರ ಸಾಮಗ್ರಿಗಳು ಉರಿದು ನಾಶಗೊಂಡಿದೆ. ಕೂಡಲೇ ಮನೆಯಲ್ಲಿದ್ದವರು ನೀರೆರೆದು  ಬೆಂಕಿ ನಂದಿಸಿದುದರಿಂದ ಭಾರೀ ದುರಂತ ತಪ್ಪಿಹೋಗಿದೆ.

ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಮವ್ವಲ್‌ನಲ್ಲಿ ಕಳೆದ ದಿನ ರಾತ್ರಿ ಈ ಘಟನೆ ನಡೆದಿದೆ. ವರ ಹಾಗೂ ತಂಡ ತಲುಪಿದಾಗ ಸಿಡಿಸಿದ ಪಟಾಕಿಯಿಂದ ಹಾರಿದ ಬೆಂಕಿಕಿಡಿ ಚಪ್ಪರಕ್ಕೆ ಹತ್ತಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಘಟನೆ ವೇಳೆ ೧೦೦ರಷ್ಟು ಮಂದಿ ಮನೆಯಲ್ಲಿದ್ದರು. ಕೂಡಲೇ ಬೆಂಕಿ ನಂದಿಸಿದುದರಿಂದ ಹೆಚ್ಚಿನ ಅಪಾಯ ತಪ್ಪಿಹೋಗಿದೆ.

RELATED NEWS

You cannot copy contents of this page