ಉಪ್ಪಳ-ತೃಕರಿಪುರ ಸೇರಿದಂತೆ 16 ರೈಲ್ವೇ ಮೇಲ್ಸೇತುವೆಗಳ ನಿರ್ಮಾಣ ವೆಚ್ಚ ಭರಿಸಲು ಮುಂದಾದ ಕೇಂದ್ರ ಸರಕಾರ
ಕಾಸರಗೋಡು: ಕೆ ರೈಲಿಗೆ ವಹಿಸಿಕೊಡ ಲಾಗಿರುವ ಉಪ್ಪಳ ಸೇರದಂತೆ ರಾಜ್ಯದ 16 ರೈಲ್ವೇ ಮೇಲ್ಸೇತುವೆಗಳ ನಿರ್ಮಾಣ ವೆಚ್ಚವನ್ನು ಪೂರ್ಣವಾಗಿ ವಹಿಸಲು ಕೇಂದ್ರ ಸರಕಾರ ಒಪ್ಪಿಕೊಂಡಿದೆ.
ರಾಜ್ಯದಲ್ಲಿ 27 ರೈಲ್ವೇ ಮೇಲ್ಸೇತುವೆ ಗಳನ್ನು ನಿರ್ಮಿಸಲು 2019ರಲ್ಲಿ ಕೆ ರೈಲು ವಿಭಾಗ ತೀರ್ಮಾನಿಸಿತ್ತು. ಆದರೆ ಅದಕ್ಕೆ ಅಗತ್ಯದ ಭೂ ಸ್ವಾಧೀನಕ್ರಮ, ಪರಿಸರ ಆಘಾತ ಕುರಿತಾದ ಅಧ್ಯಯನ ಇತ್ಯಾದಿಗಳಿಗೆ ಭಾರೀ ವೆಚ್ಚ ವ್ಯಯಿಸಬೇಕಾಗಿ ರುವ ಹಿನ್ನೆಲೆಯಲ್ಲಿ ಆ ಯೋಜನೆಯನ್ನು ಜ್ಯಾರಿಗೊಳಿಸಲು ಈತನಕ ಸಾಧ್ಯವಾಗಿಲ್ಲ. ಆದ್ದರಿಂದಾಗಿ ಈ ಯೋಜನೆಗಳ ನಿರ್ಮಾಣ ವೆಚ್ಚವನ್ನು ವಹಿಸುವಂತೆ ರಾಜ್ಯ ಸರಕಾರ ಕೇಂದ್ರ ಸರಕಾರದೊಡನೆ ಬಳಿಕ ವಿನಂತಿಸಿಕೊಂಡಿತ್ತು. ಅದರಂತೆ ೧೭ ಮೇಲ್ಸೇತುವೆಗಳ ನಿರ್ಮಾಣ ವೆಚ್ಚವನ್ನು ಪೂರ್ಣವಾಗಿ ವಹಿಸಲು ಕೇಂದ್ರ ಸರಕಾರ ಒಪ್ಪಿಕೊಂಡಿದೆ. ಇದರಲ್ಲಿ ಕೇರಳದಲ್ಲಿ ಉಪ್ಪಳ ಮತ್ತು ಸೌತ್ ತೃಕರಿಪುರದಲ್ಲಿ ನಿರ್ಮಿಸಲಾ ಗುವ ರೈಲ್ವೇ ಮೇಲ್ಸೇತುವೆ ಗಳನ್ನು ಒಳಪಡಿಸಲಾಗಿದೆ.