ಉಪ್ಪಳ ಲಯನ್ಸ್ ಕ್ಲಬ್‌ನಲ್ಲಿ ಕಣ್ಣಿನ ಪೊರೆ ಉಚಿತ ತಪಾಸಣೆ ಶಿಬಿರ 22ರಂದು

ಉಪ್ಪಳ: ಲಯನ್ಸ್ ಕ್ಲಬ್ ಮಂಜೇಶ್ವರ, ಉಪ್ಪಳ ಶ್ರೀ ಧರ್ಮಚಕ್ರ ಟ್ರಸ್ಟ್ ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು, ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಇದರ ಜಂಟಿ ಆಶ್ರಯದಲ್ಲಿ ಕಣ್ಣಿನ ಪೊರೆ ಉಚಿತ ತಪಾಸಣೆ ಶಿಬಿರ ಮತ್ತು ರಿಯಲ್ ಲ್ಯಾಬ್ ಹೊಸಂಗಡಿ, ಮಂಜೇಶ್ವರ ಇವರಿಂದ ಮಧುಮೇಹ ಉಚಿತ ತಪಾಸಣೆ ಶಿಬಿರ ಎಪ್ರಿಲ್ 22ರಂದು ಬೆಳಿಗ್ಗೆ 10ರಿಂದ ನಯಬಜಾರ್‌ನಲ್ಲಿರುವ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ. ಕ್ಲಬ್‌ನ ಅಧ್ಯಕ್ಷ ಲ| ಕಮಲಾಕ್ಷ ಪಂಜ ಅಧ್ಯಕ್ಷತೆ ವಹಿಸುವರು. ಲ| ಲಕ್ಷ÷್ಮಣ್ ಕುಂಬಳೆ ಉದ್ಘಾಟಿಸುವರು. ಶ್ರೀ ಭಾರತೀ ನೇತ್ರ ಚಿಕಿತ್ಸಾಲಯದ ಆಡಳಿತಾಧಿಕಾರಿ ಲ| ಡಾ|.ಎಂ ಶ್ರೀಧರ ಭಟ್ ಪ್ರಾಸ್ತಾವಿಕ ಭಾಷಣ ಮಾಡುವರು. ಲ| ಕೆ.ವಿ ರಾಮ ಚಂದ್ರನ್, ಲ| ಕೆ.ಸುಕುಮಾರನ್, ಲ| ಮಧುಸೂಧನ್ ಪಿ.ವಿ, ಲ| ಪ್ರೋ.ಗೋಪಿನಾಥನ್.ವಿ, ನೇತ್ರ ತಜ್ಞ ಡಾ.ನಿತ್ಯಾನಂದ ಎ.ಶೆಟ್ಟಿ, ಲ| ಮಾಧವ.ಕೆ, ಲ| ಚರಣ್ ಬಂದ್ಯೋಡು ಉಪಸ್ಥಿತರಿರುವರು.

RELATED NEWS

You cannot copy contents of this page