ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿ: ತಪ್ಪಿದ ಭಾರೀ ದುರಂತ

ಉಪ್ಪಳ: ಸಂಚರಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕೂಡಲೇ ನಿಲ್ಲಿಸಿ  ನಂದಿಸಲು ಸಾಧ್ಯವಾದು ದರಿಂದ ಭಾರೀ ದುರಂತ ತಪ್ಪಿಹೋಗಿದೆ. ನಿನ್ನೆ ಸಂಜೆ ೪ ಗಂಟೆಗೆ ಕೈಕಂಬ-ಬಾಯಾರು ರಸ್ತೆಯಲ್ಲಿ ಸೋಂಕಾಲು ಮಸೀದಿ ಬಳಿ  ಈ ಘಟನೆ ನಡೆದಿದೆ. ಕನ್ನಟಿ ಪಾರೆ ನಿವಾಸಿ ಜಾಸಿಂ ಎಂಬವರ ಕಾರು ಬೆಂಕಿಗಾಹುತಿಯಾಗಿದೆ. ಇವರು  ನಿನ್ನೆ ಸಂಜೆ ಉಪ್ಪಳಕ್ಕೆ ತೆರಳುತ್ತಿದ್ದರು. ಸೋಂಕಾಲು ಮಸೀದಿ ಬಳಿಗೆ ತಲುಪಿದಾಗ ಕಾರಿನ ಇಂಜಿನ್ ಭಾಗದಿಂದ ಹೊಗೆ ಕಾಣಿಸಿಕೊಂಡಿದೆ.  ಈ ಬಗ್ಗೆ   ಇತರರು ಜಾಸಿಂರಿಗೆ ಸೂಚನೆ ನೀಡಿದ್ದು ಕೂಡಲೇ ನಿಲ್ಲಿಸಿ ಬೋನೆಟ್ ತೆರೆದು ನೋಡಿದಾಗ ಬೆಂಕಿ ಉರಿಯು ತ್ತಿರುವುದು ಕಂಡುಬಂದಿದೆ.  ಈ ಬಗ್ಗೆ ಲಭಿಸಿದ ಮಾಹಿತಿಯಂತೆ ಉಪ್ಪಳದಿಂದ ತಲುಪಿದ ಅಗ್ನಿಶಾಮ ಕದಳ ಬೆಂಕಿ ನಂದಿಸಿದ್ದು ಅಷ್ಟರೊಳಗೆ ಇಂಜಿನ್ ಪೂರ್ಣ ಉರಿದು ನಾಶವಾಗಿದೆ. ಅಗ್ನಿಶಾಮಕದಳದ ಸೀನಿಯರ್ ಫಯರ್ ಆಫೀಸರ್ ಸಂತೋಷ್, ಸಿಬ್ಬಂದಿಗಳಾದ ಲಿನೇಶ್, ಸತೀಶ್, ಸುರೇಶ್, ಚಾಲಕ ಚರಣ್ ಮೊದಲಾದವರು ಬೆಂಕಿ ನಂದಿಸುವ ಕಾರ್ಯಾ ಚರಣೆಯಲ್ಲಿ ಭಾಗವಹಿಸಿದರು.

You cannot copy contents of this page