ಪತ್ನಿ, ಪುತ್ರನನ್ನು ಕುತ್ತಿಗೆ ಸೀಳಿ ಕೊಲೆಗೈದು ಆತ್ಮಹತ್ಯೆಗೆತ್ನಿಸಿದ ಯುವಕ

ತೃಶೂರು: ಪತ್ನಿ ಮತ್ತು ನಾಲ್ಕು ವರ್ಷದ ಪುತ್ರನನ್ನು ಕುತ್ತಿಗೆ ಸೀಳಿ ಕೊಲೆಗೈದ ಬಳಿಕ ಯುವಕ ಆತ್ಮಹತ್ಯೆಗೈಯ್ಯಲೆತ್ನಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಇಂದು ಮುಂಜಾನೆ ೧.೩೦ರ ವೇಳೆ ತೃಶೂರಿನಲ್ಲಿ  ಈ ಬೀಭತ್ಸ ಘಟನೆ ನಡೆದಿದೆ. ತೃಶೂರು ತೇಕಿನಿಯಡ್ಕದ ವಿಸ್ಮಯ (30), ಪುತ್ರ ದಕ್ಷಿತ್ (4) ಕೊಲೆಗೈಯ್ಯಲ್ಪಟ್ಟ ದುರ್ದೈವಿಗಳಾಗಿದ್ದಾರೆ. ವಿಸ್ಮಯಳ ಪತಿ ವಿಜೇಶ್ (35) ಈ ಅವಳಿ ಕೊಲೆಕೃತ್ಯ ನಡೆಸಿರುವುದಾಗಿ ಆರೋಪಿಸಲಾಗಿದೆ.

 ಪತ್ನಿ ಮತ್ತು ಪುತ್ರನನ್ನು ಕುತ್ತಿಗೆ ಸೀಳಿ ಕೊಲೆಗೈದ ಬಳಿಕ ವಿಜೇಶ್ ಸ್ವಯಂ ತನ್ನ ಕುತ್ತಿಗೆಯನ್ನು ಸೀಳಿ ಆತ್ಮಹತ್ಯೆಗೆತ್ನಿಸಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಈತನನ್ನು ತೃಶೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮನೆಯ ಕೊಠಡಿಯೊಳಗಿನಿಂದ ಇಂದು ಮುಂಜಾನೆ ವಿಸ್ಮಯಳ    ಬೊಬ್ಬೆ ಕೇಳಿದ  ಆಕೆಯ ಸಹೋದರ ಬಾಗಿಲು ತೆರೆದು ನೋಡಿದಾಗ ವಿಸ್ಮಯಳ ಕುತ್ತಿಗೆ ಸೀಳಿದ್ದು ಇದರಿಂದ ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ.  ಪತ್ನಿಗೆ ಇರಿದ ಬಳಿಕ   ವಿಜೇಶ್ ಪುತ್ರ ದಕ್ಷಿತ್‌ನನ್ನು ಇನ್ನೊಂದು ಕೊಠಡಿಗೆ ಕೊಂಡೊಯ್ದು ಆತನ ಕುತ್ತಿಗೆ ಸೀಳಿ ಕೊಲೆಗೈದಿದ್ದಾನೆ. ಆ ಬಳಿಕ  ಆತ ಸ್ವಯಂ ತನ್ನ ಕುತ್ತಿ ಗೆಗೂ ಇರಿದು ಗಾಯಗೊಳಿಸಿ ದ್ದಾನೆ. ತಕ್ಷಣ ಈ ಮೂವರನ್ನು ಆಸ್ಪತ್ರೆಗೆ ಸಾಗಿಸಲಾಯಿ ತಾದರೂ ತಾಯಿ ಮತ್ತು ಮಗನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.  ಕುಟುಂಬ ಕಲಹವೇ ಈ ಕೊಲೆಗೆ ಕಾರಣವೆಂದು ಹೇಳಲಾಗುತ್ತಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

You cannot copy contents of this page