ಎಂಡಿಎಂಎ ಸಹಿತ ಕಾರಿನಲ್ಲಿ ಸಂಚಾರ ಇಬ್ಬರು ಯುವಕರ ಸೆರೆ

ಕಾಸರಗೋಡು: ಹೊಸ ಕಾರಿನಲ್ಲಿ ಮಾದಕವಸ್ತು ಸಹಿತ ತಿರುಗಾಡುತ್ತಿದ್ದ ಇಬ್ಬರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಚೌಕಿ ಅರ್ಜಾಲ್ ರಸ್ತೆಯ ಮಿಯಾದ್ ಅಬ್ದುಲ್ ರಹ್ಮಾನ್ (23), ಚೌಕಿ ಕೆ.ಕೆ.ಪುರದ ಕೆ.ಎ. ಮನ್ಸೂರ್ (28) ಎಂಬಿವರನ್ನು ಕಾಸರಗೋಡು ನಗರ ಠಾಣೆ ಎಸ್‌ಐ ಅನ್ಸಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಮೊನ್ನೆ ಸಂಜೆ ಕೂಡ್ಲು ಅರ್ಜಾಲ್ ರಸ್ತೆಯಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಸಂಶಯ ರೀತಿಯಲ್ಲಿ ಕಂಡುಬಂದ ಈ ಇಬ್ಬರನ್ನು ಪ್ರಶ್ನಿಸಿದಾಗ ವ್ಯತ್ಯಸ್ಥ ಹೇಳಿಕೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾರು ತಪಾಸಣೆ ನಡೆಸಿದಾಗ ೪೪೨೦ ರೂ. ಹಾಗೂ ಎಂ.ಡಿ.ಎಂ.ಎ ಪತ್ತೆಯಾ ಗಿದೆ. ಸ್ವಂತ ಅಗತ್ಯಕ್ಕೂ, ಮಾರಾಟ ಕ್ಕಾಗಿಯೂ ಈ ಮಾದಕವಸ್ತುವನ್ನು ತಂದಿರುವುದಾಗಿ ಬಂಧಿತರಾದವರು ಪೊಲೀಸರಲ್ಲಿ ತಿಳಿಸಿದ್ದಾರೆ.

RELATED NEWS

You cannot copy contents of this page